ಧರ್ಮಸ್ಥಳ: ಕಾಂಗ್ರೆಸ್ ಮುಖಂಡ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ ಚಂದನ್ ಕಾಮತ್ ಅವರು ನ.21ರಂದು ಸಚಿವ ಬೈರತಿ ಬಸವರಾಜ್ ಅವರ ಆಶಯದಂತೆ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರಿಕೊಂಡರು.
ಈ ವೇಳೆ ಚಂದನ್ ಕಾಮತ್ ಅವರನ್ನು ಸಚಿವರು ಆತ್ಮೀಯವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಈ ಸಂದರ್ಭ ಶಾಸಕ ಹರೀಶ್ ಪೂಂಜ, ಭಾಸ್ಕರ್ ಧಮ೯ಸ್ಥಳ ಮತ್ತಿತರರು ಉಪಸ್ಥಿತರಿದ್ದರು.