ತಾಲೂಕು ಸುದ್ದಿ

ತಾಲೂಕು ಮಟ್ಟದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ‌‌ ದಿನಾಚರಣೆ

ಬೆಳ್ತಂಗಡಿ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳತ, ತಾಲೂಕು ಪಂಚಾಯತು, ಪಟ್ಟಣ ಪಂಚಾಯತು, ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ‌‌ ದಿನಾಚರಣೆ ಅ.9 ರಂದು ಶ್ರೀ ಮಂಜುನಾಥ ಸ್ವಾಮಿ ಕಲಾಭವನ, ಬೆಳ್ತಂಗಡಿಯಲ್ಲಿ ಜರುಗಿತು.

ಸಮಾರಂಭವನ್ನು ಶಾಸಕ ಹರೀಶ್ ಪೂಂಜ, ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ ಭಾಗವಹಿಸಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜು, ಮೂಡಬಿದ್ರೆಯ ಉಪನ್ಯಾಸಕ ಹಾಗೂ ಲೇಖಕರು, ಚಿಂತಕರಾದ ಟಿ.ಎ.ಎನ್.ಖಂಡಿಗೆ ಮಹಷಿ೯ ವಾಲ್ಮೀಕಿ ಜಯಂತಿಯ ಮಹತ್ವದ ಬಗ್ಗೆ ತಿಳಿಸಿದರು. ಜಿ.ಪಂ ಮಾಜಿ ಸದಸ್ಯ ಕೊರಗಪ್ಪ ನಾಯ್ಕ, ಎಸ್.ಟಿ ಮೋಚಾ೯ ಜಿಲ್ಲಾ ಅಧ್ಯಕ್ಷ ಚೆನ್ನಕೇಶವ, ನಾವೂರು ಗ್ರಾ.ಪಂ ಅಧ್ಯಕ್ಷ ಗಣೇಶ ಗೌಡ, ತಾ.ಪಂ ಮಾಜಿ ಸದಸ್ಯ ಕೊರಗಪ್ಪ ಗೌಡ, ಸೀತಾರಾಮ ಬಿ.ಎಸ್ ಬೆಳಾಲ್  ,ತಹಶೀಲ್ದಾರ್ ಪೃಥ್ವಿ ಸಾನಿಕಮ್ , ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಹೇಮಚಂದ್ರ, ಮೇಲ್ವಿಚಾರಕಿ ಹೇಮಲತಾ, ಸಿಬಂದಿ ಆಶಾ ಪೂಣಿ೯ಮ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ