ತಾಲೂಕು ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಗಂಭೀರ ಅನಾರೋಗ್ಯ ನಿಧಿ ಕಾಯ೯ಕ್ರಮದ ಉದ್ಘಾಟನೆ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಗಂಭೀರ ಅನಾರೋಗ್ಯ ನಿಧಿ ಕಾಯ೯ಕ್ರಮದ ಉದ್ಘಾಟನೆ ಸೆ.15 ರಂದು ಧಮ೯ಸ್ಥಳ ಧಮ೯ಶ್ರೀ ಸಭಾಂಗಣದಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಿ ಕಾರ್ಯಕ್ರಮದ  ಉದ್ಘಾಟನೆಯನ್ನು ನೆರವೇರಿಸಿದರು.

ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರೂ ಆಗಿರುವ  ಸುಚಿತಾ ಗುಪ್ತಾರವರು  ಮಾರಣಾಂತಿಕ ಅನಾರೋಗ್ಯ ನಿಧಿ ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿ ಅತಿಥಿ ಭಾಷಣವನ್ನು ಮಾಡಿದರು.

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|| ಎಲ್. ಎಚ್. ಮಂಜುನಾಥ್  ಆರೋಗ್ಯ ರಕ್ಷಾ ಕಾರ್ಡ್ ವಿತರಿಸಿ ಮಾತನಾಡಿದರು.

ವೇದಿಕೆಯಲ್ಲಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯ ಜನರಲ್ ಮೆನೇಜರ್ ಪೀಟರ್ ಚಿತ್ತರಂಜನ್, ಸಹಾಯಕ ಜನರಲ್ ಮೆನೇಜರ್ ಕೇಶವ ಮೋಹನ , ಎಂ.ಬಿ ರಾವ್, ಅಶೋಕ್ ಕುಮಾರ್, ಪುಷ್ಪಲತಾ ಉಪಸ್ಥಿತರಿದ್ದರು.

ಸುಮಂಗಲ ಮತ್ತು ಕವಿತಾ ಪ್ರಾರ್ಥನೆಯನ್ನು ಹಾಡಿದರು.ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ಸ್ವಾಗತಿಸಿ,   ಪ್ರಾದೇಶಿಕ ವಿಮಾ ವಿಭಾಗ ನಿರ್ದೇಶಕ ಪುರುಷೋತ್ತಮ ಧನ್ಯವಾದಗೈದರು.

ನಿಮ್ಮದೊಂದು ಉತ್ತರ