ಬೆಳ್ತಂಗಡಿ: ಜಲ ಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಸೆ.1ರಂದು ಬಂದಾರು ಗ್ರಾಮದ ಮೊಗೆರಡ್ಕದಲ್ಲಿ
ರೂ. 240 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆ ಸಹಿತ ಆಣೆಕಟ್ಟು ನಿಮಾ೯ಣದ
ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಸಚಿವರು ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳಿಗೆ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಆರಂಭಿಸಲಾಗಿದ್ದು, ಮುಂದಿನ ವಷ೯ ಮಾಚ್೯ ಒಳಗೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಹರೀಶ್ ಪೂಂಜ, ಬಂದಾರು ಗ್ರಾಮ.ಪಂಚಾಯತ್ ಅಧ್ಯಕ್ಷ ಪರಮೇಶ್ವರಿ ಕೆ.ಗೌಡ, ಸದಸ್ಯರಾದ ಬಾಲಕೃಷ್ಣ ಗೌಡ, ಶಿವ ಗೌಡ, ಜಗದೀಶ ಕೊಂಬೇಡಿ, ಮಂಜುಶ್ರೀ, ಶಿವಪ್ರಸಾದ್ ಪಿಡಿಒ
ಮೋಹನ್ ಬಂಗೇರ ಹಾಗೂ ಪಂದ್ಮಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ, ಪ್ರಮುಖ ರಾದ ರಾಮಣ್ಣ ಗೌಡ ದೇವಸ್ಯ, ಬಾಬು ಗೌಡ, ಸಿ. ಎ.ಬ್ಯಾಂಕ್ ನಿದೇ೯ಶಕಿ
ಶೀಲಾವತಿ, ಪುರಂದರಗೌಡ, ಪುರುಷೋತ್ತಮ ಗೌಡ, ಮನೋಹರ ಗೌಡ ಮೊಗೇರಡ್ಕ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೊಗೇರಡ್ಕ ದೈವಸ್ಥಾನ ಕೈ ಸಚಿವ ರಾಜು ಹಾಗೂ ಶಾಸಕರು ಭೇಟಿ ನೀಡಿದರು.ದೈವಸ್ಥಾನದ ವತಿಯಿಂದ ಇಬ್ಬರನ್ನೂ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.