ತಾಲೂಕು ಸುದ್ದಿ

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿ ಸೇವೆಯಿಂದ ನಿವೃತ್ತಿ

ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿ ಅವರು ಮೇ.31 ರಂದು ವೃತ್ತಿಯಿಂದ ನಿವೃತ್ತಿ ಹೊಂದಿದರು.

‌ಇವರು 1998 ರಲ್ಲಿ ವೃತ್ತಿ ಆರಂಭಿಸಿ 2008ರ ತನಕ ನಾರಾವಿ, ಇಂದಬೆಟ್ಟು ಅಳದಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಕಣ್ಣಿನ ತಜ್ಞರಾಗಲು ಆಸಕ್ತಿ ಹೊಂದಿದ ಇವರು 2008 ಕ್ಕೆ ಮೈಸೂರು ಮೆಡಿಕಲ್ ಕಾಲೇಜಿಗೆ ಸೇರಿ ಕಣ್ಣಿನ ಬಗ್ಗೆ ತಿಳಿದು ನಂತರ 2010 ರಲ್ಲಿ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಕಣ್ಣಿನ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.

ನಂತರ ಅಲ್ಲಿಂದ ಭಡ್ತಿಗೊಂಡು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ವೈದ್ಯಾಧಿಕಾರಿಯಾಗಿ ಮೇ.31 ರಂದು ನಿವೃತ್ತಿಹೊಂದಿದರು. ಪತಿ ಡಾ| ಗುರುಪ್ರಸಾದ್, ಪುತ್ರಿಯರಾದ ಅನುಷಾ ಇವರಿಗೆ ಮದುವೆಯಾಗಿದ್ದು, ಅನುಜ್ಞಾ ಮಂಗಳೂರಿನ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ