ತಾಲೂಕು ಸುದ್ದಿ

ಭಾರತೀಯ ಜನತಾ ಪಾರ್ಟಿ ಬಿಜೆಪಿ ಮಂಡಲದಿಂದ ಕಾರ್ಯನಿರ್ವಾಹಣಾ ತಂಡದ ಸಭೆ

ಕಂದಾಯ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದಿಂದ ಕಾರ್ಯನಿರ್ವಹಣ ತಂಡದ ಸಭೆಯು
ಕರಾಯ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಮೇ.28ರಂದು ನಡೆಯಿತು
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಉದ್ಘಾಟಿಸಿ ಮಾತನಾಡಿ. ಬೆಳ್ತಂಗಡಿ ಬಿಜೆಪಿ ಕಾರ್ಯ ನಿರ್ವಹಣಾ ತಂಡದ ಕೆಲಸವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ಶಕ್ತಿ ಕೇಂದ್ರಕ್ಕೆ ಎಂಎಲ್ಸಿ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿಪ್ರಚಾರ ಕಾರ್ಯ ಆರಂಭಿಸುತ್ತಾರೆ ಎಂದರು.


ತಾಂಬೂಲ ಪ್ರಶ್ನೆ ಮಾಡಿದವರನ್ನು ಬಂಧಿಸಬೇಕು ಎಂಬ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಕೆ.ಶಿವಕುಮಾರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ. ಡಿಕೆಶಿ ಅವರ ಮಾತಿನಂತೆ, ತುಳುನಾಡಿನಲ್ಲಿ ಯಾವುದೇ ನಾಗರಾಧನೆ, ಯಾವುದೇ ಪ್ರತಿಷ್ಠೆಯನ್ನು ಮಾಡಲು ಆಗುವುದಿಲ್ಲ. ತುಳುನಾಡು ಸಂಸ್ಕಾರಕ್ಕೆ ಅವರು‌ ಅಪಚಾರ ಮಾಡಿದ್ದಾರೆ. ಕೂಡಲೇ ಹಿಂದುಗಳು ಅವರ ಮಾತನ್ನು ಖಂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ
ಬಿಜೆಪಿ ಮಂಡಲದ ಅಧ್ಯಕ್ಷರಾದ ಜಯಂತ ಕೋಟ್ಯಾನ್.
ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು
ಕಣಿಯೂರು ಜಿಲ್ಲಾ ಮಹಾಶಕ್ತಿ ಮಂಡಲದ ಅಧ್ಯಕ್ಷರಾದ ಜಯಾನಂದ ಕಲ್ಲಾಪು ಸ್ವಾಗತಿಸಿ
ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ, ತಾಪಂ ಮಾಜಿ ಸದಸ್ಯರಾದ ಮಹಾಬಲ ಗೌಡ ವಂದಿಸಿದರು

 

ನಿಮ್ಮದೊಂದು ಉತ್ತರ