ತಾಲೂಕು ಸುದ್ದಿ

ಕೊಳಂಬೆಯಲ್ಲಿ ಬದುಕು ಕಟ್ಟೋಣ ತಂಡದ ಮೂಲಕ ನಿರ್ಮಿಸಿದ 12 ಮನೆಗಳ ಗೃಹ ಪ್ರವೇಶೋತ್ಸವ

ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮತ್ತು ಶಾಸಕ ಹರೀಶ್ ಪೂಂಜ ಅವರ ಮಾರ್ಗದರ್ಶನದಲ್ಲಿ
ಚಾರ್ಮಾಡಿ ಗ್ರಾಮದ ಕೊಳಂಬೆ ನೆರೆಪೀಡಿತ ಪ್ರದೇಶದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಮೂಲಕ ನಿರ್ಮಿಸಿದ 12 ಮನೆಗಳ ಗೃಹ ಪ್ರವೇಶೋತ್ಸವ ಮೇ.8 ರಂದು ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 9 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.


ಬಳಿಕ ನಡೆದ ಸಮಾರಂಭದಲ್ಲಿ 12 ಮನೆಗಳ ಉದ್ಘಾಟನೆಯನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೆರವೇರಿಸಿ, ಮನೆಗಳ‌ ಕೀ ಹಸ್ತಾಂತರಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ , ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ, ನ್ಯಾಯವಾದಿ ಧನಂಜಯ ರಾವ್ ಬೆಳ್ತಂಗಡಿ ಭಾಗವಹಿಸಿ

ಶುಭ ಕೋರಿದರು. ಚಾರ್ಮಾಡಿ ಗ್ರಾ.ಪಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಚಾರ್ಮಾಡಿ ಗ್ರಾ. ಪಂ.ಅಧ್ಯಕ್ಷ ಕೆ.ವಿ ಪ್ರಸಾದ್, ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ರಂಜಿನಿ, ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ ಇವರು ಗೌರವ ಉಪಸ್ಥಿತರಿದ್ದರು.
ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಉಪಸ್ಥಿತರಿದ್ದರು.
ಈ ಸಂದಭ೯ದಲ್ಲಿ ಮನೆ ನಿರ್ಮಾಣದಲ್ಲಿ ಸಹಕರಿಸಿದ ಇಂಜಿನಿಯರ್ ಯಶೋಧರ ಪೂಜಾರಿ, ಡಿ.ಎಂ.ಸಿ ಕಕ್ಷನ್ ವಿಭಾಗ, ಧರ್ಮಸ್ಥಳ, ಅಂಬರೀಶ್, ಸಿವಿಲ್ ಕಂಟ್ರಾಕ್ಟರ್‌, ಗಣೇಶ್ ಕುಲಾಲ್, ಮೇಸ್ತ್ರಿ, ಪ್ರತೀಕ್ ನಾಯ್ಕ, ಪೈಂಟರ್ ಇವರನ್ನು ಗೌರವಿಸಲಾಯಿತು.
ಪ್ರಕಾಶ್ ಶೆಟ್ಟಿ ನೊಚ್ಚ ಪಂ. ಅಭಿವೃದ್ಧಿಅಧಿಕಾರಿ, ಚಾರ್ಮಾಡಿ ಸ್ವಾಗತಿಸಿದರು. ಪ್ರವಾಹ ಪೀಡಿತ ಚಾರ್ಮಾಡಿ ಗ್ರಾಮದ  ಕೊಳಂಬೆ ಪರಿಸರದಲ್ಲಿ ನಡೆದ ಕಾರ್ಯಕ್ರಮದ ವೀಡಿಯೋ ಪ್ರದರ್ಶನ ನಡೆಯಿತು.
ಮೋಹನ್‌ಕುಮಾರ್ ಸಂಚಾಲಕರು ಬದುಕು ಕಟ್ಟೋಣ ಬನ್ನಿ ತಂಡ ಪ್ರಸ್ತಾವಿಕವಾಗಿ ಮಾತನಾಡಿದರು.
ರಾಜೇಶ್ ಪೈ ಸಂಚಾಲಕರು ಬದುಕು ಕಟ್ಟೋಣ ಬನ್ನಿ ತಂಡ ಇವರು ವಂದಿಸಿದರು.
ವಾಸ್ತು ಹೋಮ,-
ಮೇ 7ರಂದು ಸಂಜೆ 7ಗಂಟೆಯಿಂದ `ವಾಸ್ತು ರಾಕ್ಷೋಘ್ನ ಹೋಮ ನಡೆಯಿತು

ನಿಮ್ಮದೊಂದು ಉತ್ತರ