ತಾಲೂಕು ಸುದ್ದಿ

ಬೆಳ್ತಂಗಡಿ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಹಕಾರಿ ಭಾರತಿಗೆ ಜಯಭೇರಿ

ಬೆಳ್ತಂಗಡಿ: ಪ್ರತಿಷ್ಠಿತ ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಸ್ಥಾನಗಳಿಗೆ ಮಾ.3 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಆಭ್ಯರ್ಥಿಗಳು
11 ಸ್ಥಾನಗಳಲ್ಲಿ ಜಯಭೇರಿ ಭಾರಿಸಿ ಸಂಘದ  ಅಧಿಕಾರವನ್ನು ತಮ್ಮ ವಶಕ್ಕೆ ಪಡೆದು ಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತರು ಒಂದು ಸ್ಥಾನವನ್ನು ಪಡೆಯಲಷ್ಟೆ ಶಕ್ತರಾಗಿದ್ದಾರೆ
ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯಿಂದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಹಾಲಿ ಸದಸ್ಯ ಅಜಿತ್ ಕುಮಾರ್ ಆರಿಗ, ಹಾಲಿ ಸದಸ್ಯ ಗಣೇಶ್ ಭಂಡಾರಿ, ನಾರಾಯಣ ಆಚಾರ್ಯ, ಶ್ರೀನಾಥ ಕೆ.ಎಂ, ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಮೇಶ್ ನಲ್ಕೆ, ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಹರಿಯಪ್ಪ ನಾಯ್ಕ, ಸಾಲಗಾರರ ಮಹಿಳಾ ಕ್ಷೇತ್ರದಿಂದ ಪ್ರೇಮ ಎಂ, ಹಾಲಿ ಸದಸ್ಯೆ ರಾಧ, ಸಾಲಗಾರರ ಹಿಂದುಳಿದ ವರ್ಗ ಎಯಿಂದ ಪುರಂದರ, ಸಾಲಗಾರರ ಹಿಂದುಳಿದ ವರ್ಗ ಬಿ ಯಿಂದ ಅಶೋಕ್ ರೈ, ಸಾಲೇತರ ಕ್ಷೇತ್ರದಿಂದ ತಿಮ್ಮಯ್ಯ ನಾಯ್ಕ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ರಾಗಿ ಸ್ಪಧಿ೯ಸಿದ್ದ ಹಾಲಿ ಅಧ್ಯಕ್ಷ ಮುನಿರಾಜ ಅಜ್ರಿ ಬೊಳಿಯಂಜಿ ಗೆಲುವು ಸಾಧಿಸಿದ್ದಾರೆ.

ನಿಮ್ಮದೊಂದು ಉತ್ತರ