ತಾಲೂಕು ಸುದ್ದಿ

ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದಲ್ಲಿ ಅಭಿವೃದ್ಧಿಯ ಪರ್ವ ಶಾಸಕರಿಂದ ರೂ.11 ಕೋಟಿಯ ಕಾಮಗಾರಿಗಳ ಶಿಲಾನ್ಯಾಸ-ಉದ್ಘಾಟನೆ

ಮಲವಂತಿಗೆ : ಕುಗ್ರಾಮವೆಂದೇ ಹೆಸರಾಗಿದ್ದ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದಲ್ಲಿ ಸುಮಾರು ರೂ.11.20 ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಮಾ.2ರಂದು ನೆರವೇರಿಸಿದರು.


ರೂ.5 ಕೋಟಿ ವೆಚ್ಚದ ಕಿಂಡಿಅಣೆಕಟ್ಟು ಸಹಿತ ಸೇತುವೆ, ರೂ.5 ಕೋಟಿ ವೆಚ್ಚದ ಎಳನೀರು-ದಿಡುಪೆ ರಸ್ತೆ, ರೂ.50 ಲಕ್ಷದ ಎಳನೀರು ಪ.ಪಂಗಡ ಕಾಲನಿ ಕಿರು ಸೇತುವೆಗೆ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ರೂ.13 ಲಕ್ಷ ವೆಚ್ಚದ ಗುತ್ಯಡ್ಕ ಅಂಗನವಾಡಿ, ರೂ. 10ಲಕ್ಷದ ಗುತ್ಯಡ್ಕ ಶಾಲೆ ರಸ್ತೆ ಕಾಂಕ್ರೀಟೀಕರಣ, ರೂ.10 ಲಕ್ಷದ ಕುರೆಕಲ್ ರಸ್ತೆ ಕಾಂಕ್ರೀಟೀಕರಣ, ರೂ.9 ಲಕ್ಷದ ಬಡಮನೆ ರಸ್ತೆ ಕಾಂಕ್ರೀಟೀಕರಣ, ರೂ.8ಲಕ್ಷದ ಎಳನೀರು ಬ್ರಹ್ಮಸ್ಥಾನದ ತೂಗುಸೇತುವೆ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು.

ರೂ.5ಲಕ್ಷದ ಎಳನೀರು ಸಮುದಾಯ ಭವನ ದುರಸ್ತಿ, ರೂ.2 ಲಕ್ಷ ಎಳನೀರು ಅಂಗನವಾಡಿ ದುರಸ್ತಿ, ರೂ.3 ಲಕ್ಷದ ಗುತ್ಯಡ್ಕ ಶಾಲೆ ರಸ್ತೆಯಲ್ಲಿ ಮೋರಿ ರಚನೆ, ರೂ.10 ಲಕ್ಷದ ಬಂಗಾರ ಪಲ್ಕೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಶಾಸಕರು ತಾಲೂಕಿನ ಗಡಿ ಎಳನೀರಿನಿಂದ ದಿಡುಪೆಗೆ ಬರುವ ರೆವೆನ್ಯೂ ಇಲಾಖೆಯ ಅಧೀನದಲ್ಲಿ ಬರುವ ಆರಂಭದ ಮೂರು ಕಿಲೋಮೀಟರ್ ರಸ್ತೆ

ಕಾಂಕ್ರೀಟಿಕರಣಕ್ಕೆ ಐದು ಕೋಟಿ ಮೀಸಲಿಟ್ಟು ಶಿಲಾನ್ಯಾಸ ನೆರವೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆದು ದಿಡುಪೆ-ಸಂಸೆ ರಸ್ತೆಯ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ. ಇದರ ಜೊತೆಗೆ ಬಂಗಾರಪಲ್ಕೆಯ ಜನರ ಬೇಡಿಕೆಯಾಗಿರುವ ಕಿಂಡಿ ಅಣೆಕಟ್ಟು ಮತ್ತು ಸರ್ವ ಋತು ಸೇತುವೆಗೆ 5 ಕೋಟಿ ಅನುದಾನವಿಟ್ಟು ಶಿಲಾನ್ಯಾಸ ಪೂರ್ಣಗೊಳಿಸುತ್ತೇವೆ. ನನ್ನ ಶಾಸಕತ್ವದಲ್ಲಿ ಅವಧಿಯಲ್ಲಿ ಎಳನೀರಿಗೆ ರೂ.12 ಕೋಟಿ ಅನುದಾನ ಸಿಕ್ಕಿರುವುದಕ್ಕೆ ನನಗೆ ಖುಷಿಯಿದೆ.ಇಲ್ಲಿಗೆ ಬಂದಿರುವ ವೇಳೆ ವಿದ್ಯುತ್ ಸಮಸ್ಯೆ,ಮೊಬೈಲ್ ನೆಟ್ ವರ್ಕ್ ಸಮಸ್ಯೆ,ಹಕ್ಕುಪತ್ರಗಳ ಪಡೆಯುವಲ್ಲಿ ಸಮಸ್ಯೆ ಎಲ್ಲವನ್ನೂ ಕೂಡ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ನಾವು ಮಾಡಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಳನೀರು ಭಾಗಕ್ಕೆ ಭಾರಿ ಪ್ರಮಾಣದಲ್ಲಿ ಅನುದಾನ ಒದಗಿಸಿದ ಶಾಸಕರನ್ನು ಊರುವರ ವತಿಯಿಂದ ಸನ್ಮಾನಿಸಲಾಯಿತು. ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕೆ, ಉಪಾಧ್ಯಕ್ಷ ದಿನೇಶ್, ಕಳಸ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗಭೂಷಣ್,ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಕಳಸ ಗ್ರಾ ಮ ಪಂ ಅಧ್ಯಕ್ಷೆ ಸುಜಯ, ಮಲವಂತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಜೈನ್, ರೋಹಿಣಿ, ಆದಿನಾಥ ಸಂಘದ ಅಧ್ಯಕ್ಷ ಫಣೀಂದ್ರ ಜೈನ್, ಕೇಶವ ದಿಡುಪೆ, ಶೇಷಗಿರಿ ಹಾಗೂ ಕಳಸ ಮತ್ತು ಮಲವಂತಿಗೆ ಗ್ರಾಮ ಪಂಚಾಯತ್ ಗ್ರಾಮಸ್ಥರು ಭಾಗಿಯಾಗಿದ್ದರು.ಹರೀಶ್ ಎಳನೀರು ಸ್ವಾಗತಿಸಿದರು

ನಿಮ್ಮದೊಂದು ಉತ್ತರ