ಬೆಳ್ತಂಗಡಿ: ಅಕ್ರಮ ಸ್ಥಳಗಳಲ್ಲಿರುವ ದೇವಸ್ಥಾನ ಮತ್ತು ಪ್ರಾರ್ಥನಾ ಮಂದಿರಗಳನ್ನು ದ್ವಂಸಗೊಳಿಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದ ವತಿಯಿಂದ ಸೆ.24 ರಂದು ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ ಜರುಗಿತು
ಈ ಸಂದರ್ಭದಲ್ಲಿ ಲಾಯಿಲ ವೆಂಕಟರಮಣ ದೇವಸ್ಥಾನದ ಬಳಿಯಿಂದ ಹೊರಟು ಬೆಳ್ತಂಗಡಿ ಮುಖ್ಯ ಪೇಟೆಯಲ್ಲಿ ಸಾಗಿ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಕಾಲ್ನಡಿಗೆ ಜಾತಾ ನಡೆಸಲಾಯಿತು.
ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆ. ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಕಾಂಗ್ರೆಸ್ ವಕ್ತಾರರಾದ ಕೇಶವ ಪಿ ಬೆಳಾಲು, ಮನೋಹರ್ ಇಳಂತಿಲ, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಡು, ಅಲ್ಪಸಂಖ್ಯಾತರಾದ ಘಟಕದ ನಗರ ಅಧ್ಯಕ್ಷ ಸಲೀಮ್ ಜಿ.ಕೆರೆ ,
ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ವ್ಯಾಸ ಭಟ್ ಶಿಶಿಲ, ಕಾರ್ಮಿಕ ಘಟಕದ ಜಿಲ್ಲಾ ಕಾರ್ಯ ಅಧ್ಯಕ್ಷ ಸುರೇಶ್ ಮೂಲ್ಯ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್ ನೆರಿಯ, ಎಸ್.ಸಿ ಘಟಕದ ಅಧ್ಯಕ್ಷ ರವಿ ನೇತ್ರಾವತಿ ನಗರ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಶುಭಿತ್ ಕುಮಾರ್ ಪುದುವೆಟ್ಟು, ಕಿಸಾನ್ ಘಟಕದ ಅಧ್ಯಕ್ಷ ದಿನೇಶ್ ಕೋಟ್ಯಾನ್ ಹಾಗೂ ಪಂಚಾಯತ್ ರಾಜ್ ರಾಜೀವ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ರೋಹಿ ಪುದುವೆಟ್ಟು, ಪಟ್ಟಣ ಪಂಚಾಯತ್ ಸದಸ್ಯರಾದ ಜಗದೀಶ್ ಡಿ, ಮುಸ್ತರ್ ಜಾನ್ ಮೆಹಬೂಬ್, ಜನಾರ್ಧನ್, ಪ್ರಮುಖರಾದ ಶಂಕರ್ ಹೆಗ್ಡೆ, ಪದ್ಮನಾಭ ಸಾಲಿಯಾನ್, ವಿನ್ಸೆಂಟ್, ಜಯವಿಕ್ರಮ್, ಆಯೂಬ್, ಅಬ್ದುಲ್ ಗಫೂರ್, ಮಧುಕರ ಸುವಣ೯, ಸೆಭಾಸ್ಟಿನ್ ಕಳೆಂಜ, ಅಬ್ದುಲ್ ಕರೀಂ,
ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.