ತಾಲೂಕು ಸುದ್ದಿ

ಬೆಳ್ತಂಗಡಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ
65 ಯಕ್ಷಗಾನ ಕಲಾವಿಧರಿಗೆ ಪ್ರೋತ್ಸಾಹ ಧನ ವಿತರಣೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಇದರ ವತಿಯಿಂದ ೧೧ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಗಣಹೋಮ ಹಾಗೂ ತಾಲೂಕಿನ ವಿವಿಧ ಮೇಳಗಳ 65 ಮಂದಿ ಕಲಾವಿಧರಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಸೆ.1೦ರಂದು ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಜರುಗಿತು.
ವಿಧಾನ ಪರಿಷತ್ ಶಾಸಕ ಹಾಗೂ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಕಲಾವಿದರಿಗೆ ಪ್ರೋತ್ಸಾಹ ಧನವನ್ನು ವಿತರಿಸಿ ಮಾತನಾಡಿ, ಯಕ್ಷಗಾನ ನಮ್ಮ ಪರಂಪರೆ ಇದೊಂದು ಶ್ರೀಮಂತ ಕಲೆ, ಕಲಾವಿಧರು ಸೇವಾ ಮನೋಭಾವ ಮತ್ತು ಸಮರ್ಪಣಾ ಭಾವದಿಂದ ತಮ್ಮ ಸೇವೆಯನ್ನು ನೀಡುತ್ತಿರುವುದರಿಂದ ಈ ಕಲೆ ಇಂದಿಗೂ ಉಳಿದುಕೊಂಡು ಬಂದಿದೆ. ಈಗ ಕಾಲದ ಬದಲಾವಣಗೆ ಅನುಗುಣವಾಗಿ ಯಕ್ಷಗಾನದಲ್ಲೂ ಆನೇಕ ಪರಿಷರ್ತನೆಗಳಾಗಿವೆ. ಸಾಮಾಜಿಕ ಜಾಲತಾಣದಲ್ಲೂ ನೇರ ಪ್ರಸಾರ ಕಾರ್ಯಕ್ರಮಗಳನ್ನು ಬರುತ್ತಿರುವುದರಿಂದ ಮನೆಯಲ್ಲೇ ಕುಳಿತು ಇದನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಯಕ್ಷಗಾನ ಕಲಾವಿದ ಉಜಿರೆ ಆಶೋಕ್ ಭಟ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ಯಕ್ಷಗಾನ ಕಲಾವಿಧರನ್ನು ಪ್ರೋತ್ಸಾಹಿಸುತ್ತಿರುವ ಎಂ.ಎಲ್.ಸಿ ಹರೀಶ್ ಕುಮಾರ್ ಅವರ ಸೇವಾ ಮನೋಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಆಗಮಿಸಿದ ಕಲಾವಿಧರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಮೋಹನ್ ಶೆಟ್ಟಿಗಾರ್ ಉಜಿರೆ, ಸುಭಾಶ್ಚಂದ್ರ ರೈ ಅರ್ವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯರಾದ ಮಂಜುನಾಥ ಕಾಮತ್, ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿ, ಅರೆಕ್ಕಲ್ ರಾಮಚಂದ್ರ ಭಟ್, ಜಗದೀಶ್ ಹೆಗ್ಡೆ ನಾವರ, ರಮೇಶ್ ಪೂಜಾರಿ ಕಂಬಲ್ದಡ್ಡ, ಶೈಲೇಶ್‌ಕುಮಾರ್ ಕುರ್ತೋಡಿ, ನ.ಪಂ ಸದಸ್ಯ ಡಿ. ಜಗದೀಶ್, ಅಭಿನಂದನ್ ಹರೀಶ್‌ಕುಮಾರ್, ನಮೀತಾ ಹರೀಶ್ ಕುಮಾರ್, ರಾಜೇಶ್ ಮೂಡುಕೋಡಿ ಮೊದಲಾದವರು ಉಪಸ್ಥಿತರಿದ್ದರು.
ನ್ಯಾಯವಾದಿ ಕೇಶವ ಗೌಡ ಬೆಳಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಶೆಟ್ಟಿಗಾರ್ ಉಜಿರೆ ಧನ್ಯವಾದ ವಿತ್ತರು.

ನಿಮ್ಮದೊಂದು ಉತ್ತರ