ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಹೊರ ಜಿಲ್ಲೆಗಳಿಂದ ಬರುವ ಯಾತ್ರಿಕರನ್ನು ನಿಯಂತ್ರಿಸಲು ಚೆಕ್ ಪೋಸ್ಟ್ ಗಳಲ್ಲಿ ಕಠಿಣ ತಪಾಸಣೆ

ಧಮ೯ಸ್ಥಳ: *ಧರ್ಮಸ್ಥಳ ದ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯಕ ಕಮಿಷನರ್ ಕಂದಾಯ ಇಲಾಖೆ ಉಪವಿಭಾಗ ಪುತ್ತೂರು   ಯತೀಶ್ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂ.20ರಂದು ತುರ್ತು ಸಭೆ ನಡೆಯಿತು.*

ಯಾತ್ರಾರ್ಥಿಗಳ ಸಂಖ್ಯೆಯನ್ನುನಿಯಂತ್ರಿಸುವ ನಿಟ್ಟಿನಲ್ಲಿಧರ್ಮಸ್ಥಳ ಪೊಲೀಸ್ ಠಾಣೆಯ ಮತ್ತು ಪೊಲೀಸ್ ಠಾಣೆಯ ಅಧಿಕಾರಿವರ್ಗದವರು ನಿರಂತರವಾಗಿ ಹೊರಜಿಲ್ಲೆಗಳ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆನಡೆಸಿಯಾತ್ರಾರ್ಥಿ ಗಳನ್ನು ಹಿಂದಕ್ಕೆಕಳುಹಿಸುವಬಗ್ಗೆಕ್ರಮಕೈ

ಗೊಳ್ಳುವುದು. ಹೊರ ಜಿಲ್ಲೆಯ ಪ್ರಮುಖಪ್ರವೇಶದ್ವಾರಗಳಾದ ಗುಂಡ್ಯಾ ಚೆಕ್ ಪೋಸ್ಟ್, ಚಾರ್ಮಾಡಿ ಚೆಕ್ ಪೋಸ್ಟ್, ನಾರಾವಿ ಚಕ್ ಪೋಸ್ಟ್, ಉಪ್ಪಿನಂಗಡಿ ಚೆಕ್ ಪೋಸ್ಟ್, ಸಂಪಾಜೆ ಚಕ್ ಪೋಸ್ಟ್, ಗಳಲ್ಲಿ ಜಿಲ್ಲಾಡಳಿತದಿಂದ ದೇವಸ್ಥಾನಗಳ ಪ್ರವೇಶ ನಿರ್ಬಂಧ ಕುರಿತು ಬ್ಯಾನರ್ ಗಳನ್ನು ಹಾಕಿ ಪ್ರಚಾರ ಪಡಿಸುವ ಬಗ್ಗೆ ಕ್ರಮ ಕೈಗೊಳ್ಳುವುದು, ದೇವಸ್ಥಾನದ ಪ್ರಮುಖ ಪ್ರವೇಶ ದ್ವಾರಗಳಲ್ಲಿ ದೇವಸ್ಥಾನ ಮತ್ತು ಅನ್ನಛತ್ರ, ವಸತಿ


ಗೃಹಗಳು ಲಾಕ್ ಡೌನ್ ಹಿನ್ನೆಲೆಯಲ್ಲಿ ಭಕ್ತಾದಿ
ಗಳಿಗೆ ಪ್ರವೇಶ ನಿಷೇಧಿಸಿದೆ ಎಂಬ ಬ್ಯಾನರ್ ಗಳನ್ನು ದೇವಸ್ಥಾನದ ಆಡಳಿತದ ಮೂಲಕ ಪ್ರಚಾರ ಪಡಿಸುವುದು. ಹಾಗೂ ಶ್ರೀ ಧರ್ಮಸ್ಥಳ ದೇವಸ್ಥಾನದ ಆಡಳಿತದ ವತಿಯಿಂದ ಸರಕಾರದ ನಿರ್ಬಂಧದ ಆಜ್ಞೆ ಇರುವ ಹಿನ್ನೆಲೆಯಲ್ಲಿ ಭಕ್ತರಿಗೆ ಸೂಚನೆಗಳನ್ನು ದೃಶ್ಯ ಮತ್ತು ಪತ್ರಿಕಾ ಮಾಧ್ಯಮದಲ್ಲಿ ಪ್ರಚಾರಪಡಿಸಲು ಸಭೆಯಲ್ಲಿ ತಿಳಿಸಲಾಯಿತು. ಈ ಸಂದರ್ಭ
ದಲ್ಲಿ ಬೆಳ್ತಂಗಡಿ ತಹಸೀಲ್ದಾರ್ ಹಾಗೂ
ತಾಲೂಕು ದಂಡಾಧಿಕಾರಿ ಮಹೇಶ್ , ಪೊಲೀಸ್ ಉಪನಿರೀಕ್ಷಕರು ಪೊಲೀಸ್ ಠಾಣೆ ಧರ್ಮಸ್ಥಳ ಚಂದ್ರಶೇಖರ್ , ಪೊಲೀಸ್ ಉಪನಿರೀಕ್ಷಕರು ಸಂಚಾರಿ ಪೊಲೀಸ್ ಠಾಣೆ ಬೆಳ್ತಂಗಡಿ ಓಡಿಯಪ್ಪ ಗೌಡ , ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ಶಿವಪ್ರಸಾದ್ ಅಜಿಲರು, ಧರ್ಮಸ್ಥಳ ರಜತಾದ್ರಿ ಕೋವಿಡ್ ಕೇರ್ ಸೆಂಟರ್ ನೋಡಲ್ ಅಧಿಕಾರಿ ಡಾ. ಜಯಕೀರ್ತಿ ಜೈನ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಧರ್ಮಸ್ಥಳ ಉಮೇಶ್ ಕೆ , ಪ್ರದೀಪ್ ಗ್ರಾಮಕರಣಿಕರು ಧರ್ಮಸ್ಥಳ, ಪಾರ್ಶ್ವನಾಥ ಜೈನ್ ಮ್ಯಾನೇಜರ್ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳ ಗ್ರಾಮ ಪಂಚಾಯತಿ ಸದಸ್ಯರಾದ ರವಿಕುಮಾರ್, ದಿನೇಶ್ ರಾವ್, ಹರ್ಷಿತ ಜೈನ್ , ಸಭೆಯಲ್ಲಿ ಉಪಸ್ಥಿತರಿದ್ದರು

ನಿಮ್ಮದೊಂದು ಉತ್ತರ