ಬೆಳ್ತಂಗಡಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ರವರ ಸಹಕಾರದಿಂದ ಕೆ.ಐ.ಓ.ಸಿ.ಎಲ್. ಲಿಮಿಟೆಡ್ (ಭಾರತ ಸರ್ಕಾರದ ಉದ್ಯಮ) ಇದರ ಸಿ.ಎಸ್.ಆರ್. ಅನುದಾನದಿಂದ ಬೆಳ್ತಂಗಡಿ ತಾಲೂಕಿನ ಜನತೆಯ ಆರೋಗ್ಯ ಸೇವೆಗೆ 50 ಬೆಡ್ಗಳ ಹಸ್ತಾಂತರ ಕಾರ್ಯಕ್ರಮವು ಮೇ.29 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ಜರುಗಿತು.ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ರವರು ಸಿ.ಎಸ್.ಆರ್. ಅನುದಾನದಡಿಯಲ್ಲಿ ವಿತರಿಸಲಾದ 50 ಬೆಡ್ಗಳನ್ನು ಸಾಂಕೇತಿಕವಾಗಿ ತಾಲೂಕು ಶಾಸಕ ಹರೀಶ್ ಪೂಂಜ ರವರ ಮೂಲಕ ತಾಲೂಕು ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ಕೋವಿಡ್ ಸಂತ್ರಸ್ತರ ಚಿಕಿತ್ಸೆಗೆ ಅನುಕೂಲವಾಗಲು ಬೆಳ್ತಂಗಡಿ ತಾಲೂಕಿಗೆ ಬೆಡ್ಗಳನ್ನು ಒದಗಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಬೇಡಿಕೆ ಇಟ್ಟಿದ್ದು, ಕೆ.ಐ.ಓ.ಸಿ.ಎಲ್. ಲಿಮಿಟೆಡ್ನ ಸಿ.ಎಸ್.ಆರ್. ಅನುದಾನದಿಂದ ಈ 50 ಬೆಡ್ಗಳನ್ನು ಶಾಸಕರ ಮೂಲಕ ಟಿಹೆಚ್ಓ ಅವರಿಗೆ ಹಸ್ತಾಂತರಿಸಲಾಗಿದೆ. ಶಾಸಕರ ನಿರ್ದೇಶನದಂತೆ ಕೋವಿಡ್ ಸಂತ್ರಸ್ತರಿಗೆ ಈ ಬೆಡ್ಗಳ ಬಳಕೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಕೆ.ಐ.ಓ.ಸಿ.ಎಲ್. ಲಿಮಿಟೆಡ್ನ ಮುಖ್ಯ ಆಡಳಿತ ನಿರ್ದೇಶಕ ಸುಬ್ಬರಾವ್, ವಿಭಾಗೀಯ ಪ್ರಬಂಧಕ ರಾಮಕೃಷ್ಣ ರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ನ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ಸೀನಿಯರ್ ಮ್ಯಾನೇಜರ್ ಮುರುಗೇಶ್, ಹೆಚ್.ಆರ್. ಮ್ಯಾನೇಜರ್ ರೊನಾಲ್ಡ್ ಪಾಯ್ಸ್, ತಹಶೀಲ್ದಾರ್ ಮಹೇಶ್ ಜೆ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡತ ವೈದ್ಯಾಧಿಕಾರಿ ಡಾ| ವಿದ್ಯಾವತಿ, ಮುಖ್ಯಾಧಿಕಾರಿ ಸುಧಾಕರ್, ನ.ಪಂ ಸದಸ್ಯ ಶರತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.