ತಾಲೂಕು ಸುದ್ದಿ

ಉಜಿರೆಯ ಒಂದೇ ಕುಟುಂಬದ ಮೂವರು ಮೃತ್ಯು

ಬೆಳ್ತಂಗಡಿ: ಕೇವಲ 15 ದಿನಗಳಲ್ಲಿ ಒಂದೇ ಕುಟುಂಬದ ಒಬ್ಬರು ಕೊವಿಡ್ ಮತ್ತು ಇಬ್ಬರು ಇತರ ಕಾರಣ ಗಳಿಂದ ಮೃತ ಪಟ್ಟ ಘಟನೆ ಉಜಿರೆ ಗ್ರಾಮದ ಗಾಂಧಿನಗರ ಎಂಬಲ್ಲಿ ನಡೆದಿದೆ.

 

ಉಜಿರೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಶ್ರೀನಿವಾಸ್ ಉಜಿರೆ ಅವರ ತಂದೆ ಪುರಲ್ಲ (92) ಎಂಬವರು ಕೋವಿಡ್ 19 ಸೋಂಕಿಗೆ ಮೇ 13 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 6 ಗಂಡು , 1 ಹೆಣ್ಣು ಮಕ್ಕಳಿದ್ದಾರೆ. ಇದಾದ ನಂತರ ಮೃತರ ಮಗಳು ಅಪ್ಪಿ (45) ಯವರು ಮಂಗಳೂರಿನಲ್ಲಿ ಮೇ 23 ರಂದು ನಿಧನರಾದರು. ಇದಾದ ಬಳಿಕ ಮೃತ ಅಪ್ಪಿರವರ ಪತಿ ಗುರುವ (52) ಮೇ 27 ರಂದು ವಿಧಿವಶರಾದರು.ದಂಪತಿಗಳಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ.

ಕೇವಲ ಹದಿನೈದು ದಿನಗಳಲ್ಲಿ ಒಂದೇ ಕುಟುಂಬದ ಮೂರು ಸದಸ್ಯರು ನಿಧನರಾದರು.

 

ನಿಮ್ಮದೊಂದು ಉತ್ತರ