ತಾಲೂಕು ಸುದ್ದಿ

ರಾಜೀವ್ ಗಾಂಧಿರವರ ಪುಣ್ಯಸ್ಮರಣೆ: ಬ್ಲಾಕ್ ಕಾಂಗ್ರೆಸ್ ನಿಂದ ಜೌಷಧಿ ಸಾಮಾಗ್ರಿಗಳ ಹಸ್ತಾಂತರ

ಬೆಳ್ತಂಗಡಿ: ಅಧುನಿಕ ಭಾರತದ ನಿರ್ಮಾತೃ,
ಡಿಜಿಟಲ್ ಕ್ರಾಂತಿಯ ಮೂಲಕ ದೇಶದ ಪ್ರಗತಿಗೆ ಮುನ್ನುಡಿ ಬರೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ 30ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಮೇ 21 ರಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ

ಬ್ಲಾಕ್ ವತಿಯಿಂದ ಬೆಳ್ತಂಗಡಿ ತಾಲೂಕು ಆರೋಗ್ಯ ಕೇಂದ್ರಕ್ಕೆ ಕೊರೊನ ನಿಯಂತ್ರಣಕ್ಕೆ ಪೂರಕವಾಗಿ ಅಗತ್ಯ ವೈದ್ಯಕೀಯ,ಔಷಧಿ ಸಾಮಾಗ್ರಿ ಹಾಗೂ ಒಳರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.
ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಶಾಸಕ ಹರೀಶ್ ಕಿಟ್ ಹಸ್ತಾಂತರಿಸಿದರು. ಈ ಸಟದಭ೯ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿ,ಗ್ರಾಮೀಣ ಅಧ್ಯಕ್ಷರಾದ ರಂಜನ್ ಜಿ ಗೌಡ,ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು,ಡಿಸಿಸಿ ಕಾರ್ಯದರ್ಶಿ ಜಗದೀಶ್ ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್,ಯುವ ಕಾಂಗ್ರೆಸ್ ಮುಖಂಡರಾದ ಅಭಿನಂದನ್ ಹರೀಶ್, ಎಸ್ಸಿ ಘಟಕದ ಅಧ್ಯಕ್ಷ ಶ ಬಿ .ಕೆವಸಂತ್,ಸಾಮಾಜಿಕಜಾಲತಾಣ

ಅಧ್ಯಕ್ಷ ಸಂದೀಪ್ ಎಸ್.ನೀರಲ್ಕೆ
ಅರ್ವ,ನಗರ ಪಂಚಾಯತ್ ಸದಸ್ಯರಾದ
ಜನಾರ್ದನ್,ನಗರ ಪಂಚಾಯತ್ ಮಾಜಿ ಸದಸ್ಯ ಮಹಬೂಬ್, ಪ್ರಭಾಕ ರ್ ಶಾಂ ತಿಕೋಡಿ, ಅಜಯ್ ಮಟ್ಲ, ಸತೀಶ್ ಶೆಟ್ಟಿ ಜೈನ್ ಪೇಟೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಕೊರೊನ ನಿಯಮಾವಳಿ ಗಳಿಗೆ ಪೂರಕ
ವಾಗಿ ವಿತರಣಾಕಾರ್ಯಕ್ರಮ ನಡೆಯಿತು.

ನಿಮ್ಮದೊಂದು ಉತ್ತರ