ಪಟ್ರಮೆ: ಮಾ.9ರಂದು ಮಧ್ಯಾಹ್ನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಫ್ತಿಯ ಪಟ್ರಮೆ ಗ್ರಾಮದ ಕಾಯಿಲ ಎಂಬಲ್ಲಿ ಸ್ಥಳಿಯ ನಿವಾಸಿ ಲೋಕಯ್ಯ ಗೌಡ (65) ಎಂಬವರ ಜಾಗದಲ್ಲಿದ್ದ ಮರವನ್ನು (ಧೂಪದ ಮರ) ಕಡಿಯುತ್ತಿದ್ದಾಗ ಮರ
ಕಡಿಯುತ್ತಿದ್ದವರ ಮೇಲೆ ಉರುಳಿ ಬಿದ್ದು
ಮರ ಕಡಿಯುತ್ತಿದ್ದ 5 ಜನರ ಪೈಕಿ ಪಟ್ರಮೆ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಕುಂಬಾರ (23), ಸ್ವಸ್ಥಿಕ್ ಪೂಜಾರಿ (25) ಮತ್ತು ಉಪ್ಪಿನಂಗಡಿ ನಿವಾಸಿ ಗಣೇಶ್ (38)
ಎಂಬವರುಗಳು ಮೃತಪಟ್ಟಿದ್ದು, ಉಳಿದ 2 ಜನ ಯಾವುದೇ ಗಾಯಗಳಿಲ್ಲದೆ ಪಾರಾಗಿರುತ್ತಾರೆ.
ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕರು, ಧರ್ಮಸ್ಥಳ
ಮೃತ ಪ್ರಶಾಂತ
ಮೃತ ಸ್ವಸ್ತಿಕ್
ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.