ಮದ್ದಡ್ಕ: ಖ್ಯಾತ ಉದ್ಯಮಿ, ಮದ್ದಡ್ಕದ ಚಿನ್ನು ಫಾಸ್ಟ್ ಫುಡ್ ನ ಮಾಲಕ ಅಬ್ದುಲ್ ರಹಿಂ ರವರು ನಾಪತ್ತೆ ಯಾಗಿರುವುದಾಗಿ ಅವರ ಪತ್ನಿ ಫಾತಿಮ
ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾ.1ರಂದು ದೂರು ನೀಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಬೆಳ್ತಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋದವರು ಇದುವರೆಗೂ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.
ಅವರು ವ್ಯವಹಾರದಲ್ಲಿ ಬಹಳ ನಷ್ಟ ಅನುಭವಿಸಿದ್ದು, ಇದೇ ಕಾರಣದಿಂದ ತುಸು ಚಿಂತೆಗೀಡಾಗಿದ್ದರು ಎಂದು ಅವರ ಪತ್ನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.