ಮುಂಡೂರು: ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿಯಲ್ಲಿ ಶ್ರೀ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ ಹಾಗೂ ಶ್ರೀ ವರಾಹಿ ಮಂತ್ರಮೂರ್ತಿ, ಶ್ರೀ ನಾಗಕಲ್ಲುರ್ಟಿ ಶ್ರೀ ಶಕ್ತಿದೇವತೆ ಮತ್ತು ಶ್ರೀ ಗುಳಿಗರಾಜ ದೈವಗಳಿಗೆ ಕಾಲಾವಧಿ ನೇಮೋತ್ಸವ ಫೆ.೧೨ ಮತ್ತು ಫೆ.೧೩ರಂದು ವಿಜೃಂಭಣೆಯಿಂದ ಜರುಗಿತು.
ಫೆ.೧೨ರಂದು ಗಣಹೋಮ, ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಬೆಳಗ್ಗೆ ೧೦ಕ್ಕೆ ಶ್ರೀ ನಾಗಬ್ರಹ್ಮ ದೇವರಿಗೆ ತನುತಂಬಿಲ, ಆಶ್ಲೇಷಬಲಿ, ದೈವಗಳಿಗೆ ಪಂಚಪರ್ವ, ಮಧ್ಯಾಹ್ನ ೧೨.೩೦ಕ್ಕೆ
ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂರ್ಪಣೆ, ಸಂಜೆ ೭ರಿಂದ ಉದ್ಭವ ಮಹಾಗಣಪತಿ ಮತ್ತು ಶ್ರೀ ದೇವಿ ನಾಗಾಂಬಿಕಾ ಅಮ್ಮನವರಿಗೆ ಜೋಡುರಂಗ ಪೂಜೆ, ರಾತ್ರಿ ೮.೩೦ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ವಿಷ್ಟು ಕಲಾವಿದೆರ್ ಮದ್ದಡ್ಕ ಇವರಿಂದ ಅನಂತ
ಎಸ್. ಇರ್ವತ್ರಾಯ ವಿರಚಿತ ” ಕಾರ್ನಿಕದ ತ್ರಿಪುರಾಂಬಿಕೆ” ಎಂಬ ಪೌರಾಣಿಕ ತುಳು ನಾಟಕ ಪ್ರದರ್ಶನಗೊಂಡಿತು.
ಫೆ.೧೩ರಂದು ಬೆಳಗ್ಗೆ ೭ಕ್ಕೆ ಶ್ರೀ ದೇವಿ ನಾಗಾಂಬಿಕಾ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಬೆಳಗ್ಗೆ ೮ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ೧೦ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ,
ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ೫ಕ್ಕೆ ಶ್ರೀದೇವಿ ನಾಗಾಂಬಿಕಾ ಅಮ್ಮನವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ೬ಕ್ಕೆ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ, ರಾತ್ರಿ ೭ಕ್ಕೆ ಶ್ರೀ ದೈವಗಳ
ಭಂಡಾರವನ್ನು ದೈವಸ್ಥಾನಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ೧೦ರಿಂದ ಶ್ರೀ ನಾಗಕಲ್ಲುರ್ಟಿ, ಶ್ರೀವರಾಹಿ ಮಂತ್ರಮೂರ್ತಿ, ಶ್ರೀ ಶಕ್ತಿದೇವತೆ ದೈವಗಳ ನೇಮೋತ್ಸವ ವೈಭವ ಪೂರ್ಣವಾಗಿ ಜರುಗಿತು.
ರಾತ್ರಿ೮ ೨ಕ್ಕೆ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಮತ್ತು ದೈವಗಳ ಭೇಟಿ, ರಾತ್ರಿ ೩ಕ್ಕೆ ದೈವಗಳು ಕೆಳಗಿನ ಅಂಗಣಕ್ಕೆ ಇಳಿದು ನೇಮೋತ್ಸವ ಮರುದಿನ ಬೆಳಗ್ಗೆ ೫ಕ್ಕೆ ಶ್ರೀ ಗುಳಿಗ ರಾe ದೈವದ ನೇಮೋತ್ಸವ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ರಾಜೀವ, ಶ್ರೀಮತಿ ಬಬಿತ, ಕು| ತೃಪ್ತಿ, ಕು| ಸ್ತುತಿ, ಶ್ರೀ ನಾಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ
ಜಯರಾಜ್, ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಮೇಲ್ವಿಚಾರಕ ಸುಧಾಕರ್, ಮಂಗಳಗಿರಿ ಸ್ವಸಹಾಯ ಸಂಘ ಎ ತಂಡದ ಸಂತೋಷ್ ಕುಮಾರ್, ಗುಣಕರ ಕೋಟ್ಯಾನ್, ಬಿ ತಂಡದ ಜಯರಾಜ್, ಶ್ರೀಮತಿ ಸರೋಜ, ಸಿ ತಂಡದ ಪ್ರದೀಪ್, ಅನೋಜ್, ಡಿ ತಂಡದ ಶ್ರೀಮತಿ ಪುಷ್ಪಾವತಿ, ಹರೀಶ್ ಕುಲಾಲ್ ಹಾಗೂ ಊರ ಗ್ರಾಮಸ್ಥರ ಪೂರ್ಣ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರುಗಳ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.