ಕೇರಳದ ಸರೋವರ ಕ್ಷೇತ್ರ ಕುಂಬಳೆ ಅನಂತಪುರ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಬಬಿಯಾ (90) ವಯೋ ಸಹಜವಾಗಿ ನಿನ್ನೆ ರಾತ್ರಿ ದೈವೈಕ್ಯವಾಗಿದೆ.
ಅನಂತದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ವಾಸವಾಗಿದ್ದ ಬಬಿಯಾ “ದೇವರ ಮೊಸಳೆ” ಎಂದೇ ಪ್ರಸಿದ್ದಿ ಪಡೆದಿತ್ತು. ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಕೆಲ ವರ್ಷದ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.
ದೇವರ ನೈವೇದ್ಯವೇ ಬಬಿಯಾಗೆ ನಿತ್ಯ ಆಹಾರ. ಸಾಮಾನ್ಯವಾಗಿ ಮೊಸಳೆಗಳು ಮಾಂಸಹಾರಿಗಳು. ಆದ್ರೆ ಈ ಮೊಸಳೆ ಯಾವತ್ತು ಯಾವುದೇ ಪ್ರಾಣಿಯನ್ನು ಬೇಟೆಯಾಡಿಲ್ಲ, ದೇವಾಲಯದ ಕೊಳದಲ್ಲೇ ವಾಸ ಮಾಡುವ ಈ ಮೊಸಳೆ ಇವತ್ತಿನವರೆಗೆ ಕೊಳದ ಒಂದು ಮೀನನ್ನೂ ತಿಂದಿಲ್ಲವಂತೆ. ಇದು ತಿನ್ನೋದು ಕೇವಲ ದೇವರ ಪ್ರಸಾದವನ್ನು ಮಾತ್ರ ಈ ಮೊಸಳೆಗೆ ಬಬಿಯಾ ಅಂತ ಹೆಸರಿಡಲಾಗಿತ್ತು.
ಈ ಮೊಸಳೆಗೆ ದಿನಕ್ಕೆ ಎರಡು ಬಾರಿ ಪ್ರಸಾದ ನೀಡಲಾಗುತ್ತಿತ್ತು. ದೇವರ ಪೂಜೆಯ ನಂತ್ರ ಅರ್ಚಕರು “ಬಬಿಯಾ” ಎಂದು ಮೊಸಳೆಯನ್ನು ಕರೆಯುತ್ತಾರೆ. ಕೂಡಲೇ ಕೊಳದಿಂದ ದಡದ ಬಳಿ ಬರುವ ಮೊಸಳೆ ಅರ್ಚಕರು ನೀಡುವ ಪ್ರಸಾದವನ್ನು ಸ್ವೀಕರಿಸುತ್ತಿತ್ತು. ಇಲ್ಲಿ ಬರುವ ಭಕ್ತರು ಮೊಸಳೆ ಇರುವ ಕೊಳದಲ್ಲೇ ಸ್ನಾನ ಮಾಡುತ್ತಾರೆ. ಆದ್ರೆ ಇವತ್ತಿನ ವರೆಗೂ ಬಬಿಯಾ ಯಾರಿಗೂ ಹಾನಿ ಮಾಡಿಲ್ಲ ಎಂದು ಭಕ್ತರು ಸ್ಮರಿಸುತ್ತಾರೆ.
ಬ್ರಿಟಿಷ್ ಆಡಳಿತದ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಯ ಗುಂಡಿಗೆ ಬಲಿಯಾಗಿ, ಮರುದಿನ ಪುನರ್ಜನ್ಮವೆತ್ತಿ ಆಸ್ತಿಕರ ನಂಬಿಕೆ ಮತ್ತಷ್ಟು ಗಟ್ಟಿಗೊಳಿಸಿದ್ದರಿಂದ ದೇವರ ಮೊಸಳೆ ಎಂದೇ ಪ್ರಸಿದ್ಧಿ ಪಡೆದಿದಿತ್ತು. ಇಂದು ಬೆಳಗ್ಗೆ 10 ಗಂಟೆಯ ವೇಳೆ ಕ್ಷೇತ್ರ ಪರಿಸರದಲ್ಲಿ ಅಂತಿಮ ಕಾರ್ಯಗಳು ನಡೆಯಿತು.