ಬೆಂಗಳೂರು: ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಫ್ಟ್ ವೇರ್ ಇಂಜಿನಿಯರ್ ಪ್ರಶಾಂತ್ ಎಂಬವನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರಶಾಂತ್ ಬಳಿ ಹೀಗ್ಯಾಕೆ ಮಾಡಿದ್ದೆ ಎಂದು ಪೊಲೀಸರು ಕೇಳಿದ್ದಾರೆ. ಆಗ ಆತ ನೀಡಿದ ಉತ್ತರ ನೋಡಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ತನ್ನ ಲವ್ ಬ್ರೇಕಪ್ ಗಳೇ ಇದಕ್ಕೆ ಕಾರಣ ಅಂತಾ ಹೇಳಿದ್ದಾನೆ. ರಾಜ್ಯದ ವ್ಯವಸ್ಥೆ ವಿರುದ್ಧಅಸಮಧಾನ
ಗೊಂಡು ದುಷ್ಕೃತ್ಯಕ್ಕೆ ಕೈ ಹಾಕಿದ್ದಾನೆ. ವಿಧಾನಸೌಧ ಸಿಎಸ್ ಕಚೇರಿಯ ನಂಬರ್ ಗೂಗಲ್ ನಲ್ಲಿ ಸರ್ಚ್ ಮಾಡಿ, ನಂಬರ್ ತೆಗೆದುಕೊಂಡು ವಿಧಾನಸೌಧಕ್ಕೆ ಬಾಂಬ್ ಇಡಲಾಗಿದೆ ಎಂದು ಮೂರು ಬಾರಿ ಕರೆ ಮಾಡಿದ್ದಾನೆ.
ವಿಧಾನಸೌಧಲ್ಲಿ ಬಾಂಬ್ ಇಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಳ್ಳುತ್ತೆ ಎಂದು 3 ಬಾರಿ ಕರೆ ಮಾಡಿ ಕಟ್ ಮಾಡಿದ್ದಾನೆ. ಕೂಡಲೆ ಕಚೇರಿ ಸಿಬ್ಬಂದಿ ವಿಧಾನಸೌಧ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಕೇಂದ್ರ ವಿಭಾಗ ಪೊಲೀಸರು ಪೋನ್ ಕಾಲ್ ಮಾಹಿತಿ ಆಧರಿಸಿ ವಿಧಾನಸೌಧದಲ್ಲಿ ಒಂದು ವಿಶೇಷ ತಂಡ ರಚಿಸಿ ಪರಿಶೀಲನೆ ಮಾಡಿದ್ದಾರೆ. ಆದರೆ ಅದು ಹುಸಿ ಬಾಂಬ್ ಕರೆ ಎಂದು ತಿಳಿದಿದ್ದಾರೆ.
ನಂತರ ಪೊಲೀಸರು ಪೋನ್ ಕಾಲ್ ಹಿಸ್ಟ್ರಿ ಆಧರಿಸಿ ಆರೋಪಿ ಪ್ರಶಾಂತ್‌ನನ್ನು ಪತ್ತೆ ಹಚ್ಚಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದಾರೆ.