ಬೆಂಗಳೂರು: ಶಿರಾಡಿ ಘಾಟ್ ಸುರಂಗ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಗಡ್ಕರಿ ಈ ವಿಚಾರ ತಿಳಿಸಿದ್ದಾರೆ.
ಸುರಂಗ ಕಾಮಗಾರಿ ಬಗ್ಗೆ ಅರಣ್ಯ ಸಚಿವರು, ಸಿದ್ದರಾಮಯ್ಯ, ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಎಲ್ಲರೂ ಭೇಟಿಯಾಗಿದ್ದಾರೆ ಮತ್ತು ಎಲ್ಲರೂ ಕೂಡ ಚರ್ಚೆ ಮಾಡಿದ್ದಾರೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.ಅಲ್ಲದೇ ದೆಹಲಿಯಲ್ಲಿ ಕೂಡ ಈ ಕಾಮಗಾರಿ ಬಗ್ಗೆ ಚರ್ಚೆಯಾಗಿದ್ದು,
15,000 ಕೋಟಿ ರೂಪಾಯಿ ವೆಚ್ಚದಲ್ಲಿ ಟನಲ್ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿರುವ ಕೇಂದ್ರ ಸಚಿವ ಗಡ್ಕರಿ, ಯುದ್ದೋಪಾದಿಯಲ್ಲಿ ಅದರ ಕಾಮಗಾರಿ ಮಾಡಿ ಶೀಘ್ರವೇ ಮುಕ್ತ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.