ಗಣಪತಿ ದೇವರಿಗೆ ಆಧಾರ್ ಕಾರ್ಡ್(Aadhar Lord Ganesha), ಅದರಲ್ಲಿದೆ ತಂದೆಯ ಹೆಸರು(Mahadev), ದೇವರ ವಿಳಾಸ ಮತ್ತು ಹುಟ್ಟಿದ ದಿನಾಂಕ. ಇಂತಹ ವಿಶೇಷ ಗಣೇಶೋತ್ಸವ ಪೆಂಡಲ್ಕಂಡುಬಂದಿದ್ದಾದರೂ ಎಲ್ಲಿ ಗೊತ್ತಾ..? ಜಾರ್ಖಂಡ್ ರಾಜ್ಯದ ಜೆಮ್ ಶೆಡ್ ಪುರದ ಗಣೇಶೋತ್ಸವ ಪೆಂಡಲ್ ನಲ್ಲಿ ಗಣಪತಿ ದೇವರಿಗೆ ಆಧಾರ್ ಕಾರ್ಡ್ ಮಾದರಿ ಪೆಂಡಲ್ ಹಾಕಿದ್ದು, ಅದರಲ್ಲಿ ಗಣಪತಿ ವಿಳಾಸ ತಂದೆಯ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಎಲ್ಲಾ ನಮೂದಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ದೇವರಿಗೂ ಮನುಷ್ಯನ ರೀತಿ ಆಧಾರ್ ಕಾರ್ಡ್ ತಯಾರಿ ಸಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಾರ್ಖಂಡ್ ನ ಗಣಪತಿ ದೇವರ ಪೆಂಡಲ್ ನ ಆಧಾರ್ ಕಾರ್ಡ್ ನಲ್ಲಿ, ಗಣೇಶನ ಹುಟ್ಟಿದ ದಿನ 01/01/600ce ಎಂದು ನಮೂದಿಸಲಾಗಿದೆ. ಲಿಂಗ: ಪುರುಷ ಎಂದು ನಮೂದಿಸಲಾಗಿದೆ.
ತಂದೆಯ ಹೆಸರು: ಮಹದೇವ
ವಿಳಾಸ: ಕೈಲಾಸ ಪ್ರರ್ವತ, ಟಾಪ್ ಫ್ಲೋರ್, ಮಾನಸ ಸರೋವರ ಹತ್ತಿರ, ಕೈಲಾಸ ಪಿನ್ ಕೋಡ್: 000001