ಬೆಳ್ತಂಗಡಿ: ದಿ ಬೆಂಗಳೂರು ಡಿಸ್ಟ್ರಿಕ್ಟ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಇದರ ವತಿಯಿಂದ ಮೇ.27ರಂದು ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡಿಸ್ಟ್ರಿಬ್ಯೂಟರ್‍ಸ್ ಅಸೋಸಿಯೇಷನ್ ಬೆಂಗಳೂರು ರಾಜಾಜಿ ನಗರದಲ್ಲಿ ನೂತನವಾಗಿ ನಿರ್ಮಿಸಿಲಾದ `ಸುವರ್ಣ ಭವನ’ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ದ.ಕ ಜಿಲ್ಲೆಯಿಂದ ಬೆಳ್ತಂಗಡಿ ತಾಲೂಕು ಜೌಷಧ ವ್ಯಾಪಾರಸ್ಥರ ಸಂಘದಲ್ಲಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಸಂಘಟಿಸಿ, ವಿಶೇಷ ಸೇವೆ ಸಲ್ಲಿಸಿದ್ದ ಬೆಳ್ತಂಗಡಿ ಶ್ರೀ ಶಕ್ತಿ ಮೆಡಿಕಲ್ಸ್‌ನ ಮಾಲಕ ಡಿ. ಜಗದೀಶ್ ಅವರನ್ನು ಗೌರವಿಸಲಾಯಿತು.
ಕರ್ನಾಟಕ ರಾಜ್ಯದ ಡ್ರಗ್ಸ್ ಕಂಟ್ರೋಲರ್ ಬಿ.ಟಿ ಖಾನಪುರ್, ಮೈಕ್ರೋ ಲ್ಯಾಬ್‌ನ ಸಿಇಒ ದಿಲಿಫ್ ಸುರಾನ, ರಾಜ್‌ಸನ್ಸ್ ಫಾರ್ಮ್‌ದ ಎಂ.ಡಿ ರಮೇಶ್ ಕೊತಾರಿ ಹಾಗೂ ಕೆಮೆಸ್ಟ್ ಮತ್ತು ಡಿಸ್ಟಿಬ್ಯೂಟರ್‍ಸ್ ಇದರ ಅಧ್ಯಕ್ಷರಾದ ವಿ. ಹರಿಕೃಷ್ಣನ್ ಇವರು ಡಿ. ಜಗದೀಶ್ ಅವರನ್ನು ರಾಜ್ಯದ 31 ಜಿಲ್ಲೆಗಳಿಂದ ಬಂದ ಜೌಷಧ ವ್ಯಾಪಾರಸ್ಥರ ಸಂಘದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಡಿ. ಜಗದೀಶ್ ಅವರು 2008-09ರಲ್ಲಿ ಸ್ಥಾಪನೆಯಾದ ಬೆಳ್ತಂಗಡಿ ತಾಲೂಕು ಜೌಷಧ ವ್ಯಾಪರಸ್ಥರ ಸಂಘದ ಸ್ಥಾಪಕ ಅಧ್ಯಕ್ಷರಾಗಿ 12 ವರ್ಷಗಳ ಕಾಲ ಸಂಘವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿದ್ದರು. ಸಂಘದ ಎಲ್ಲಾ ಕೆಮಿಸ್ಟ್ ಬಾಂಧವರ ಸಹಕಾರದೊಂದಿಗೆ ವಿವಿಧ ಸಾಮಾಜಿಕ ಸೇವಾ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಮಟ್ಟದಲ್ಲಿ ಗೌರವಿಸಲಾಯಿತು.