ವಾಕಿಂಗ್ ವೇಳೆ ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದ ಮಗ ಹಾಗೂ ಆತನನ್ನು ಕಾಪಾಡಲು ನದಿಗಿಳಿದ ತಾಯಿ ದುರ್ಮರಣಕ್ಕಿಡಾದ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾವುಂದದಲ್ಲಿ ಸೆ 11ರಂದು ನಡೆದಿದೆ.
ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಎಂಬವರ ಪತ್ನಿ ರೋಸಾರಿಯೊ ಹಾಗೂ ಮಗ ಶಾನ್(11) ಮೃತಪಟ್ಟ ತಾಯಿ ಮತ್ತು ಮಗ
ಪ್ರತಿದಿನದಂತೆ ಇಂದು ಕೂಡ ಮನೆ ಸಮೀಪದ ಹೊಳೆ ಬದಿ ತಾಯಿ ಮತ್ತು ಮಗ ವಾಕಿಂಗ್‌ಗೆ ತೆರಳಿದ ವೇಳೆ ದುರಂತ ಸಂಭವಿಸಿದೆ. ವಾಕಿಂಗ್ ವೇಳ ಮಗ ಅಕಸ್ಮಿಕವಾಗಿ ಹೊಳೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಮಗನನ್ನು ರಕ್ಷಣೆ ಮಾಡಲು ತಾಯಿ ಕೂಡ ನೀರಿಗೆ ಹಾರಿದರೆನ್ನಲಾಗಿದೆ. ಆದರೇ ನೀರಿನ ಸೆಳವಿಗೆ ಸಿಕ್ಕ ತಾಯಿ ಮಗ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.