ಬೆಳ್ತಂಗಡಿ : ಚಾರ್ಮಾಡಿ ಘಾಟಿ ರಸ್ತೆಯ 6ನೇ ತಿರುವಿನ ಬಳಿ ಮಳೆ ನೀರು ಹರಿದು, ರಸ್ತೆಯಲ್ಲಿ ಬಿರುಕು ಉಂಟಾಗಿ ಜು.23ರಂದು ಶುಕ್ರವಾರ ಬೆಳಗ್ಗೆ ಸಣ್ಣಮಟ್ಟಿನ ಗುಡ್ಡಕುಸಿತಉಂಟಾಗಿದೆ ಇಲ್ಲಿ ಕಳೆದ ವರ್ಷ ದೊಡ್ಡ ಪ್ರಮಾಣದ ಭೂ ಕುಸಿತವಾಗಿತ್ತು. ಅಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದ್ದು, ಅದಕ್ಕೆತಾಗಿಕೊಂಡಿರುವ ಪ್ರದೇಶದಲ್ಲಿ ಹೊಸದಾಗಿ ಭೂ ಕುಸಿತಸಂಭವಿಸಿದೆ. ಕುಸಿತದಿಂದಾಗಿ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದಅಧಿಕಾರಿಗಳು ಭೇಟಿ ನೀಡಲಿದ್ದು ಬಳಿಕವಷ್ಟೆ ಕುಸಿತದಿಂದ ರಸ್ತೆಗೆಹಾನಿಯಾಗಿದೆಯೇ ಎಂದು ತಿಳಿದು ಬರಲಿದೆ.ಬೆಳ್ತಂಗಡಿ ತಾಲೂಕಿನಾದ್ಯಂತ ಶುಕ್ರವಾರ ಬೆಳಗ್ಗಿನಿಂದ
ಲೂ ಭಾರೀ ಮಳೆ ಸುರಿಯುತ್ತಿದೆ.