ರಾಜ್ಯ ವಾರ್ತೆ

ಭೂ ಪರಿವತ೯ನೆ ನ್ಯಾಯಾಲಯದ ಆದೇಶ ಅನುಷ್ಠಾನಕ್ಕೆ ಶಾಸಕ ಹರೀಶ್ ಪೂಂಜ ಪೂಂಜರಿಂದ ಮುಖ್ಯ ಮಂತ್ರಿಗಳಿಗೆ ಮನವಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಗೊಳಿಸಬೇಕಾದರೆ 11ಇ ನಕ್ಷೆ ಮತ್ತು ವಿವಿಧ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಹಾಜರು ಪಡಿಸುವುದು ಕಡ್ಡಾಯವೆಂಬ ನಿಯಮವು ಚಾಲ್ತಿಯಲ್ಲಿದೆ.

ಈ ನಿಯಮಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಪರಿವರ್ತನೆ ಗೆ ಬಯಸಿದ್ದ ಆನೇಕ ಸಾರ್ವಜನಿಕರಿಗೆ ತೊಂದರೆ ತೊಂದರೆಯುಂಟಾಗುತಿದ್ದು ಈ ನಿಟ್ಟಿನಲ್ಲಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ   ನವೀನ್ ಕುಂದರ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಗೊಳಿಸಬೇಕಾದರೆ 11ಇ ನಕ್ಷೆ ಮತ್ತು ವಿವಿಧ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಹಾಜರು ಪಡಿಸುವುದು ಕಡ್ಡಾಯವೆಂಬ ನಿಯಮದಿಂದ ವಿನಾಯಿತಿ ನೀಡಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರಿಗೆ    ನ್ಯಾಯಾಲಯದ ಆದೇಶವನ್ನು ತುರ್ತಾಗಿ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸುವಂತೆ   ಮುಖ್ಯಮಂತ್ರಿಗಳಾದ    ಬಿ ಎಸ್ . ಯಡಿಯೂರಪ್ಪ ಅವರಿಗೆ ಶಾಸಕ ಹರೀಶ್ ಪೂಂಜ  ಅವರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮಿತ್ರರಾದ ಡಾ. ಭರತ್ ಶೆಟ್ಟಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ