ಚಿಕ್ಕಮಗಳೂರು: ಹಸುವಿನ ಹೊಟ್ಟೆಯಿಂದ ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್ ಅನ್ನು ಹೊರತೆಗೆದಿರುವ ಘಟನೆ ಚಿಕ್ಕಮಗಳೂ
ರಿನ ಕಡೂರು ತಾಲೂಕಿ
ನಲ್ಲಿ ನಡೆದಿದೆ.
3ರಿಂದ 4 ವರ್ಷದ ಹಸುವಿಗೆ ಅನಾರೋಗ್ಯ ಸಮಸ್ಯೆ ಕಾಡಲಾರಂಭಿಸಿದ್ದು, ಜೀರ್ಣಕ್ರಿಯೆಯ ಸಾಮರ್ಥ್ಯ ಕಡಿಮೆಯಾದಂತೆ ಹಾಗೂ ಹೊಟ್ಟೆ ಉಬ್ಬಿದಂತೆ ಕಂಡುಬರುತ್ತಿತ್ತು.ಹಲವು ಸಮಯ
ಗಳಿಂದ ತಿಂದಿದ್ದ ಪ್ಲಾಸ್ಟಿಕ್ ಗಳು ಹಸುವಿನ ಹೊಟ್ಟೆಯಲ್ಲಿ ಹಾಗೆ ಸಂಗ್ರಹವಾಗಿತ್ತು.
ದೇಹದಲ್ಲಿ ನಿಶ್ಯಕ್ತಿ, ಪೌಷ್ಟಿಕಾಂಶದ ಕೊರತೆಯೂ ಕಂಡು ಬಂದ ಹಿನ್ನಲೆಯಲ್ಲಿ ವೈದ್ಯರ ಬಳಿ ತೋರಿಸಿದಾಗ ತಿಂದ ಆಹಾರ ಜೀರ್ಣವಾ
ಗಿಲ್ಲವೆಂಬುದು ವೈದ್ಯರ ಗಮನಕ್ಕೆ ಬರುತ್ತದೆ. ಹೀಗಾಗಿ ವೈದ್ಯರು ಸರ್ಜರಿ ಮಾಡಲು ಮುಂದಾಗುತ್ತಾರೆ. 4 ಗಂಟೆಗಳ ಕಾಲ ನಡೆದ ಸರ್ಜರಿಯಲ್ಲಿ ಹಸುವಿನ ಹೊಟ್ಟೆಯಲ್ಲಿದ್ದ ಎಲ್ಲಾ ಪ್ಲಾಸ್ಟಿಕ್ ನ್ನು ಹೊರತೆಗೆಯಲಾಗುತ್ತದೆಸರ್ಜರಿ ಮಾಡುವಾಗ ಹಸುವನ್ನು ನಿಲ್ಲಿಸಿ ಲೋಕಲ್ ಅನಸ್ತೇಷಿಯಾ ನೀಡಲಾಯಿತು. ಈಗ ಹಸು ಆರೋಗ್ಯವಾಗಿದೆ. ಇನ್ನು ನಾಲೈದು ದಿನ ಆಂಟಿಬಯೊಟಿಕ್ ಮತ್ತು ನೋವುನಿವಾರಕ
ಗಳನ್ನು ನೀಡಲಾಗುತ್ತದೆ. ಕಡೂರು ತಾಲ್ಲೂಕಿನಲ್ಲಿ ಇಂತಹ 10-15 ಪ್ರಕರಣಗಳು ವರದಿಯಾಗಿದ್ದು ಕಡೂರು ಸರ್ಕಾರಿ ಪಶುಸಂಗೋಪನೆ ಆಸ್ಪತ್ರೆಯ ಮುಖ್ಯ ಪಶುಸಂಗೋಪನಾ ಅಧಿಕಾರಿ ಡಾ .ಬಿ ಇ ಅರುಣ್ ಅವರು ಚಿಕಿತ್ಸೆ ನೀಡಿದ್ದರಂತೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಎಲ್ಲೆಂದ
ರಲ್ಲಿ ಎಸೆಯಬಾರದು ಎಂದು ಒತ್ತಾಯಿಸಿ
ದ್ದಾರೆ.ಮಣ್ಣಿನಲ್ಲಿ ಕರಗುವ ವಸ್ತುಗಳಲ್ಲಿ ಆಹಾರ ವಸ್ತುಗಳನ್ನು ಹಾಕಿ ಬಿಸಾಕಿದರೆ ಪರವಾಗಿಲ್ಲ, ಆದರೆ ಪ್ಲಾಸ್ಟಿಕ್ ಒಳಗೆ ಆಹಾರವಿದ್ದರೆ ಪ್ರಾಣಿಗಳು ಅದನ್ನು ವಾಸನೆ ಮಾಡಿ ತಿನ್ನ
ಲು ಪ್ರಯತ್ನಿಸುತ್ತವೆ. ಈ ಸಮಸ್ಯೆಯು ಕಾಡು ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತದೆ. ಇದು ನಿಧಾನವಾಗಿ ಮಣ್ಣಿನಲ್ಲಿ ವಿಷವಾಗಿ ಕಾಡುತ್ತದೆ ಎನ್ನುತ್ತಾರೆ.