ಬೆಳ್ತಂಗಡಿ:ಪರಂಗಿಪೇಟೆ ಬಳಿ ದುಷ್ಕರ್ಮಿಗಳ ತಂಡ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿರುವ ಘಟನೆಯನ್ನು ಬಿ.ಜೆ.ಪಿ
ಯುವಮೋರ್ಚಾ ಖಂಡಿಸಿದೆ.
ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿದ ದುಷ್ಕರ್ಮಿಗಳ ತಂಡವನ್ನು ಶೀಘ್ರ ವಾಗಿ ಬಂಧಿಸಬೇಕು, ಶಾಸಕರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಯುವ ಮೋರ್ಚಾದ ಅಧ್ಯಕ್ಷ ಯಶವಂತ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ ಹಾಗೂ ವಿನುತ್ ಸಾವ್ಯ ಆಗ್ರಹಿಸಿದ್ದಾರೆ.