ಲಾಯಿಲ: ಕೋಳಿಗಳು ಸಾಧಾರಣವಾಗಿ ವೃತ್ತಾಕಾರದ ಮೊಟ್ಟೆಗಳನ್ನಿಡುವುದು ಸಾಮಾನ್ಯ ವಿಚಾರ. ಆದರೆ ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು
ನಡೆಯುತ್ತಿರುತ್ತದೆ. ಇಂತಹದ್ದೇ ಅಪರೂಪದ ಘಟನೆಗೆ ಲಾಯಿಲ ಗ್ರಾಮ ಸಾಕ್ಷಿಯಾಗಿದೆ.ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬವರು ಸಾಕುತ್ತಿರುವ ಕೋಳಿ ಕಳೆದ ಕೆಲ ದಿನಗಳಿಂದ ಗೋಡಂಬಿಯಾಕಾರದಲ್ಲಿ ಮೊಟ್ಟೆಗಳನ್ನಿಡುತ್ತಿದ್ದು ನೋಡುಗರಿಗೆಅಚ್ಚರಿಯನ್ನು ತಂದಿದೆ.