ಬೆಳ್ತಂಗಡಿ: ದಕ್ಷಿಣ ಕನ್ನಡ ಆಮ್ ಆದ್ಮ ಪಾರ್ಟಿಯ ಗ್ರಾಮ ಸಂಪರ್ಕ ಅಭಿಯಾನದ ರೋನಲ್ ಸಂಘಟನಾ ಉಸ್ತುವಾರಿಯಾಗಿ ಆಮ್ ಆದಿ ಪಾರ್ಟಿಯ ಮುಖಂಡ ಹಾಗೂ ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ನೇಮಕ ಗೊಂಡಿದ್ದಾರೆ.
ಮಹಿಳಾ ಮುಖಂಡೆ ಶಾಂತಲಾ ದಾಮ್ಲ ಅವರು ಆಪ್ ದೆಹಲಿ ನಾಯಕ ಕರ್ನಾಟಕ ಚುನಾವಣೆ ಉಸ್ತುವಾರಿ ದಿಲೀಪ್ ಪಾಂಡೆ ನೇಮಕಗೊಳಿಸಿದ್ದಾರೆ.
ಇತ್ತಿಚೆಗೆ ನಡೆದ ಪಕ್ಷದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ಝೇನ್ ಉಸ್ತುವಾರಿಯನ್ನು ಕೆ.ಮಥಾಯಿ ಹಾಗೂ ಧಾಮ್ಮೆ ವಹಿಸಿಕೊಂಡಿದ್ದಾರೆ.ಮಥಾಯಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಿವಾಸಿಯಾಗಿದ್ದು, ಬೆಂಗಳೂರಿನ ಬಿಬಿಎಂಪಿ ಸಹಿತ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಹೊರತೆಗೆದಿದ್ದಾರೆ. ಈ ಕಾರಣಕ್ಕೆ ತನ್ನ 18 ವರ್ಷದ ಸೇವೆಯಲ್ಲಿ 28 ಬಾರಿ ವರ್ಗಾವಣೆಗೊಂಡಿದ್ದರು. ನಿವೃತ್ತಿ ಪಡೆದ ಮಥಾಯಿ ಆಪ್ ಸೇರಿದ್ದಾರೆ.ಈ ಸಂದರ್ಭ ಆಮ್ ಆದ್ಮ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಪ್ರಮುಖರಾದ ದಿವಾಕರ ಸನಿಲ್, ಶಾಂತಲಾ ದಾಮ್ಲ ವಿಜಯ ಶರ್ಮ, ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮೊದಲಾದವರು ಇದ್ದರು.