ಬೆಳ್ತಂಗಡಿ: ಕಾಬ೯ನ್ ಪೈಫೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು ಮತ್ತು ಜೌಷಧಿ ಸಿಂಪಡಣೆ ಶಿಬಿರ ಹಾಗೂ ಸಮೃದ್ಧಿ ಗಿಡ ಗೆಳೆತನ ಸಂಘ, ಪುತ್ತೂರು ಇವರಿಂದ “ಕೃಷಿ ಕ್ಷೇತ್ರ ವೀಕ್ಷಣೆ ಹಾಗೂ ತಜ್ಞರೊಂದಿಗೆ ಸಂವಾದ”ಕಾಯ೯ಕ್ರಮ ಇಳಂತಿಲ ಗ್ರಾಮದ ಸುಬ್ರಹ್ಮಣ್ಯ ಭಟ್ ಕೈಲಾರು ಇವರ ಅಡಿಕೆ ತೋಟದಲ್ಲಿ ಜರುಗಿತು.
ಕಾಯ೯ಮಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿ ತಜ್ಞ ಶ್ರೀ ಪಡ್ರೆ ಅವರು ಅಡಿಕೆ ಮತ್ತು ತೆಂಗಿನ ಕೃಷಿಯಲ್ಲಿ ಜೌಷಧಿ ಸಿಂಪಡಣೆ ಮತ್ತು ಕೊಯ್ಲು ಜಲಂತ್ವ ಸಮಸ್ಯೆಯಾಗೆದೆ. ಯಲ್ಲಪುರ ಮುರೂರು ಕಲ್ಲಬೆಯಲ್ಲಿ ಅಡಿಕೆ ಮರಕ್ಕೆ ಹತ್ತಿದ ಏಳು ಮಂದಿ ಬಿದ್ದು ಮೃತಪಟ್ಟ ವರದಿಗಳಿದೆ. ಸಿಂಪಡಣೆ ಮತ್ತು ಕೊಯ್ಲುಗೆ ಕಾಮಿ೯ಕರ ಅಭಾವ ಇರುವುದರಿಂದ ಇದಕ್ಕೆ ಪಯಾ೯ಯ ವ್ಯವಸ್ಥೆ ಅನಿವಾರ್ಯ ಆಗಿದೆ. ಇದಕ್ಕಾಗಿ ಈಗ ದೋಟಿ ಬಂದಿದೆ ಎಂದರು.
ದೋಟಿಯ ಬಗ್ಗೆ ಅಸಡ್ಡೆಯ ಮಾತುಗಳು ಕೇಳಿ ಬರುತ್ತಿದೆ. ಇಂತಹ ಮಾನಸಿಕತೆ ದೂರವಾಗಬೇಕು. ಇದಕ್ಕಾಗಿ ಇಂತಹ ಕಾರ್ಯಕ್ರಮ ಅಗತ್ಯವಾಗಿದೆ. ಕೈಲಾರ್ ಸುಬ್ರಹ್ಮಣ್ಯ ಭಟ್ ಅವರು ಈ ಭಾಗದ ಕೃಷಿ ಕರ ಅನುಕೂಲಕ್ಕಾಗಿ ಈ ಕಾಯ೯ಕ್ರಮ ಮಾಡಿರುವುದು ಅಭಿನಂದನೀಯ ಎಂದರು.
ದೋಟಿಯ ಬಗ್ಗೆ ಯುವಕರು ತರಬೇತಿ ಪಡೆದುಕೊಳ್ಳಬೇಕು. ಸೊಸೈಟಿಯವರು ಮುಂದೆ ಬರಬೇಕು ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಕ್ಯಾಂಪ್ಕೋದ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗಾ ಅವರು ಮಾತನಾಡಿ, ಕೃಷಿಕರು ಆಧುನಿಕತೆಗೆ ತಕ್ಕ ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಹೊಸತನಕ್ಕೆ ಹೊಂದಿಕೊಳ್ಳದಿದ್ದರೆ ಕೃಷಿ ಉಳಿಯಲು ಸಾಧ್ಯ ವಿಲ್ಲ ಕಾಬ೯ನ್ ಫೈಬರ್ ದೋಟಿ ಜೌಷಧಿ ಸಿಂಪಡಣೆ ಮತ್ತು ಕೊಯ್ಲುಗೆ ಅತ್ಯಂತ ಉಪಯುಕ್ತವಾಗಿದೆ. ತರಬೇತಿ ಪಡೆದರೆ ಸ್ವತಹ ಕೃಷಿಕ ಇದನ್ನು ಮಾಡಬಹುದು ಎಂದು ಹೇಳಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಭಟ್ ಶ್ರೀನಿಧಿ ವಹಿಸಿದ್ದರು.
ಬೆಳ್ತಂಗಡಿ ಇಕೋ ಫ್ರೆಶ್ ಎಂಟರ್ ಪ್ರೈಸಸ್ ನ ರಾಕೇಶ್ ಕೆ.ಹೆಗ್ಡೆ ಕಾಬ೯ನ್ ಫೈಬರ್ ದೋಟಿಯ ವಿಶೇಷತೆ, ಜೌಷಧಿ ಸಿಂಪಡಣೆ ಮತ್ತು ಕೊಯ್ಲುನಲ್ಲಿ ಬಳಕೆ, ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾಯ೯ಕ್ರಮದಲ್ಲಿ ಸಮೃದ್ಧಿ ಕಾಯ೯ದಶಿ೯ ಎಕ್ಕಡ್ಕ ಗಣಪತಿ ಭಟ್, ಸಿ .ಪಿ. ಆರ್. ಐ ಯ ಕೃಷಿ ವಿಜ್ಞಾನಿ ಡಾ. ಭವಿಷ್ಯ ಉಪಸ್ಥಿತಿ ಇದ್ದರು. ಕೈಲಾರ್ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಗಣಪತಿ ಭಟ್ ವರದಿ ವಾಚಿಸಿದರು. ನ್ಯಾಯವಾದಿ ಸುಬ್ರಹ್ಮಣ್ಯ ಭಟ್ ಅಗತ೯ ಕಾಯ೯ಕ್ರಮ ನಿರೂಪಿಸಿದರು. ಕಮ್ಮಾಜೆ ಶಂಕರನಾರಾಯಣ್ ಭಟ್ ವಂದಿಸಿದರು.
ಪ್ರಾತ್ಯಕ್ಷಿಕೆ:
ಬಳಿಕ ಕಾಬ೯ನ್ ಫೈಬರ್ ದೋಟಿಯ ಮೂಲಕ ಜೌಷಧಿ ಸಿಂಪಡಣೆ ಮತ್ತು ಅಡಿಕೆ ಮತ್ತು ತೆಂಗಿನ ಕಾಯಿ ಕೊಯ್ಲುನ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
ಸಂವಾದ:
ಸಿ .ಪಿ. ಆರ್. ಐ ಯ ಕೃಷಿ ವಿಜ್ಞಾನಿ ಡಾ. ಭವಿಷ್ಯ ಅವರು ಕೃಷಿಕರ ಜೊತೆ ಸಂವಾದ ನಡೆಸಿ ಕೃಷಿಕರ ಹಲವಾರು ಸಮಸ್ಯೆಗಳಿಗೆ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡಿದರು. ಜೊತೆಗೆ ತೆಂಗು,ಅಡಿಕೆ ಸೇರಿದಂತೆ ಹಲವಾರು ವಿಧದ ಕೃಷಿಯನ್ನು ಮಾಡುತ್ತಿರುವ ಸುಬ್ರಹ್ಮಣ್ಯ ಭಟ್ ಅವರ ಕೃಷಿ ಕ್ಷೇತ್ರ ವೀಕ್ಷಣೆ ನಡೆಯಿತು. ವಿವಿಧ ಊರುಗಳಿಂದ
ಸುಮಾರು 250ಕ್ಕೂ ಹೆಚ್ಚು ಕೃಷಿಕರು ಭಾಗವಹಿಸಿ, ತರಬೇತಿಯ ಸದುಪಯೋಗ ಪಡೆದು ಕೊಂಡರು. ಕಾಯ೯ಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.