ಅಳದಂಗಡಿ: ಅಳದಂಗಡಿ ಅರಮನೆ ವ್ಯಾಪ್ತಿಗೆ ಒಳಪಟ್ಟ ಅರ್ಕಿಜೆ ಕಂಬಳ ವಿವಿಧ ವಿಧಿ-ವಿಧಾನಗಳೊಂದಿಗೆ ಕಂಬಳ ಗದ್ದೆಯಲ್ಲಿ ನಡೆಯಿತು.
ಪರಂಪರಿಕವಾಗಿ ನಡೆದು ಬಂದ ಈ ಕಂಬಳದ ಸಂಪ್ರಾದಾಯವನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಅರಮನೆ ವತಿಯಿಂದ
ಇದನ್ನು ನೆರವೇರಿಸಲಾಯಿತು. ಶ್ರೀ ನಾಗಬ್ರಹ್ಮ ದೇವರಿಗೆ ಹಾಲಿನ ಅಭಿಷೇಕವಾದ ಬಳಿಕ ಕಂಬಳ
ಗದ್ದೆಯಲ್ಲಿ ಪೂಕರೆಯನ್ನು ಹಾಕಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅರಮನೆ ವ್ಯಾಪ್ತಿಯ ಗುತ್ತಿನ ಮನೆಯವರು, ಮಾಗಣೆ ಪ್ರಮುಖರು, ಊರಿನ ನಾಗರಿಕರು ಉಪಸ್ಥಿತರಿದ್ದರು.