ಬೆಳ್ತಂಗಡಿ : ಗದಗ ಜಿಲ್ಲಾ ಇಂದೋರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಯಮಟೋ ಶೋಟೋಕಾನ್ ಕರಾಟೆ ಶಾಲೆಯ ಸದಸ್ಯೆ ಕೆ.ಎಸ್. ಪೂಜಾರವರು ಅಂಡರ್ 53 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರು ಮುಖ್ಯ ಗುರು ಶಾಜು ಮುಲಾವನ, ಬೆಳ್ತಂಗಡಿ ಶಾಖೆಯ ಅಶೋಕ್ ಆಚಾರ್ಯ ಮತ್ತು ಮಿಥುನ್ ರವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಉಜಿರೆ ಕೋರಿಯಾರು ನಿವಾಸಿ ಸುಂದರ ಗೌಡ ಮತ್ತು ಆಶಾಲತಾ ದಂಪತಿ ಪುತ್ರಿಯಾಗಿರುವ ಇವರು ಪ್ರಸ್ತುತ ಉಜಿರೆ ಶ್ರೀ ಧ. ಮಂ. ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.