ಗ್ರಾಮಾಂತರ ಸುದ್ದಿ

ನಾಳದಲ್ಲಿ ಪ್ರಯಾಣಿಕರನ್ನು ಅರ್ಧದಲ್ಲಿಯೇ ಇಳಿಸಿ ಪರಾರಿಯಾದ ಖಾಸಗಿ ಬಸ್…!!!

ಪ್ರಯಾಣಿಕರನ್ನು ಅರ್ಧದಲ್ಲಿಯೇ ಇಳಿಸಿ ಪರಾರಿಯಾದ ಖಾಸಗಿ ಬಸ್
ಬೆಳ್ತಂಗಡಿ : ಬೆಳ್ತಂಗಡಿಯಿಂದ-ಉಪ್ಪಿನಂಗಡಿ ಕಡೆಗೆ ಪ್ರಯಾಣಿಕರನ್ನು ತುಂಬಿಕೊಂಡು ಹೋಗು
ತ್ತಿದ್ದ ಖಾಸಗಿ ಬಸ್ಸೊಂದು ನಾಳ ದೇವಸ್ಥಾನದ  ಮುಖ್ಯ ದ್ವಾರದ ಬಳಿ ಪ್ರಯಾಣಿಕರೆಲ್ಲರನ್ನೂ ಒತ್ತಾಯಪೂರ್ವಕವಾಗಿ
ಅಧ೯ದಲ್ಲಿ ಇಳಿಸಿ ಹೋದ ಘಟನೆ ಸೆ.24 ಮಧ್ಯಾಹ್ನ ನಡೆದಿದೆ .
ಖಾಸಗಿ ಬಸ್ ಸಿಬ್ಬಂದಿಗಳ ಈ ದುರ್ವರ್ತನೆ ಬಗ್ಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

ಶಾಲಾ ವಿದ್ಯಾರ್ಥಿಗಳು ಹಾಗೂ  ಪ್ರಯಾಣಿಕರನ್ನು ತುಂಬಿಕೊಂಡು ಪ್ರಯಾಣಿಸುತ್ತಿದ್ದ ಖಾಸಗಿ  ಬಸ್ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯ ದ್ವಾರದ ಬಳಿ  ತಲುಪುತ್ತಿದ್ದಂತೆ, ಬಸ್ಸನ್ನು ನಿಲ್ಲಿಸಿದ ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ಸಿನ್ನಲಿದ್ದ ಪ್ರಯಾಣಿಕರೆಲ್ಲರನ್ನೂ ಒತ್ತಾಯಪೂರ್ವಕವಾಗಿ ಇಳಿಸಿದ್ದಾರೆ. ಇದನ್ನು ವಿರೋಧಿಸಿದ ಪ್ರಯಾಣಿಕರು ಈ ಬಗ್ಗೆ ಕಾರಣ ಕೇಳಿದಾಗ ಯಾವುದಕ್ಕೂ  ಮರು ಉತ್ತರಿಸದೆ ಅಲ್ಲಿಂದ ಬಸ್ಸಿನೊಂದಿಗೆ ದೇವಸ್ಥಾನದ ಬಾಕಿ ಮಾರು ಗದ್ದೆಯಲ್ಲಿ ಹೋಗಿದ್ದಾರೆ.
ಬಸ್ ಸಿಬ್ಬಂದಿಗಳ ಈ ವರ್ತನೆಯಿಂದ ಟಿಕೇಟು ಪಡೆದ ಪ್ರಯಾಣಿಕರು ಆಕ್ರೋಶಗೊಂಡು ಹಿಡಿ ಶಾಪ ಹಾಕಿದ್ದಾರೆ.
ಇಂದು ಬೆಳಗ್ಗಿನಿಂದ ಬೆಳ್ತಂಗಡಿ ರಸ್ತೆಗಳಲ್ಲಿ
ಆರ್ ಟಿ ಒ ಅಧಿಕಾರಿಗಳು  ವಾಹನ ತಪಾಸಣೆ ನಡೆಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂಬ ಶಂಕೆ ಪ್ರಯಾಣಿಕ ರಲ್ಲಿ ಮೂಡಿದೆ.

ನಿಮ್ಮದೊಂದು ಉತ್ತರ