ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ನ 1ನೇ ಹಾಗೂ 2ನೇ ತಿರುವಿನ ಮಧ್ಯೆ ಇಂದು ಮುಂಜಾನೆ ಬೃಹತ್ ಮರ ರಸ್ತೆಗೆ ಬಿದ್ದು ಸುಮಾರು ಒಂದು ಗಂಟೆಯ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
,ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ವರು ಸೇರಿ ತೆರವು ಕಾರ್ಯ ನಡೆಸಿದರು.
ಮುಂಜಾನೆ 8.45ರ ವೇಳೆ ಈ ಘಟನೆ ಸಂಭವಿಸಿದ್ದು, ವಿಪರೀತ ಮಳೆ ಹಾಗೂ ಅತೀ ಹೆಚ್ಚಿನ ವಾಹನಗಳು ಮುಂಜಾನೆ ವೇಳೆ ಸಂಚರಿಸುವುದರಿಂದ ಎರಡು ಕಡೆ ರಸ್ತೆ ತಡೆ ಉಂಟಾಯಿತು.