ತಣ್ಮೀರುಪಂತ: ಆ. 28 ರಂದು ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಆಹಾರ ಸಾಮಗ್ರಿ ಗಳ ಕಿಟ್ ವಿತರಣೆ ಮಾಡಿ ಮಾತಾಡುತ್ತ ಸರಕಾರದ ಖಜಾನೆ ಯಲ್ಲಿ ಕಾರ್ಮಿಕ ತೆರಿಗೆ
ಮೂಲಕ ಸಂಗ್ರಹಣೆ ಮಾಡಿದ ಹಣವನ್ನು ಕಾರ್ಮಿಕರಿಗೆ ಅಪಘಾತ, ಮದುವೆ, ಅಥವಾ ಕೊರೊನ ಸಂಕಷ್ಟದ ಈ ಸಮಯದಲ್ಲಿ ವಿತರಣೆ ಮಾಡುತ್ತಿದ್ದು ಕಾರ್ಮಿಕರು ಇದರ ಸದುಪಯೋಗ ಪಡಕೊಳ್ಳಬೇಕು ಎಂದರು
ಕಾರ್ಯಕ್ರಮ ದಲ್ಲಿ ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್, ಅಬ್ದುಲ್ ರಹಿಮಾನ್ ಪಡ್ಪು ಪಂಚಾಯತ್ ಉಪಾಧ್ಯಕ್ಷ ಅಯೂಬ್, ಸದಸ್ಯರಾದ ಜಯವಿಕ್ರಮ್ ಕಲ್ಲಾಪು, ತಾಜುದ್ದೀನ್, ಕೇಶವನಾಯ್ಕ, ಹೇಮಾ, ಆರತಿ ನವೀನ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು