ಗ್ರಾಮಾಂತರ ಸುದ್ದಿ

ಅಳದಂಗಡಿಯ ಮದುವೆ ಸಮಾರಂಭಕ್ಕೆ ತಹಶೀಲ್ದಾರ್ ತಂಡದ ಧಿಡೀರ್ ದಾಳಿ: ನಿಯಮ ಉಲ್ಲಂಘಿಸಿದ ಕ್ಕೆ ದಂಡ

ಬೆಳ್ತಂಗಡಿ : ಅಳದಂಗಡಿಯ ಸಭಾಭವನವೊಂದರಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಕೊವೀಡ್ ನಿಯಮಕ್ಕಿಂತ ಹೆಚ್ಚಿನ ಜನರು ಸೇರಿರುವುದನ್ನು ತಿಳಿದ ತಾಲೂಕು ತಹಶೀಲ್ದಾರ್ ತಂಡದವರು ಸ್ಥಳಕ್ಕೆ ಧಾಳಿ ನಡೆಸಿ ದಂಡ ವಿಧಿಸಿದ ಘಟನೆ ಆ.26 ರಂದು ನಡೆದಿದೆ.

ಸದ್ರಿ ಮದುವೆಗೆ ಅಳದಂಗಡಿ ಗ್ರಾಮ ಪಂಚಾಯತ್ ನಿಂದ 50 ಜನರಿಗೆ ಅನುಮತಿ ಪಡೆದಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಮೀರಿ 50 ಕ್ಕಿಂತಲೂ ಅಧಿಕ ಜನರು ಸೇರಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರರ ತಂಡ ಸಭಾಭವನದ ಮಾಲಕರಿಗೆ ರೂ.7500 ಹಾಗೂ ಮದುವೆ ಮನೆಯವರಿಗೆ ರೂ.5000 ಸೇರಿದಂತೆ ಒಟ್ಟು 12,500/- ದಂಡ ವಿಧಿಸಿ, ಮುನ್ನೆಚ್ಚರಿಕೆ ನೀಡಿದ್ದಾರೆ.ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಜೆ. ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಪ್ರೊಬೆಷನರಿ ತಹಶಿಲ್ದಾರ್ ಮಹಮ್ಮದ್ ಅಲಿ ಅಕ್ರಂ ಷಾ, ಅಳದಂಗಡಿ ಗ್ರಾ.ಪಂ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಕರಣಿಕ ನಿತೇಶ್ ಜೈನ್, ಮೊದಲಾದವರು ಉಪಸ್ಥಿತರಿದ್ದರು.

 

ನಿಮ್ಮದೊಂದು ಉತ್ತರ