ಗ್ರಾಮಾಂತರ ಸುದ್ದಿ

ಲಾಯಿಲ ಕನ್ನಾಜೆಯಲ್ಲಿ 28 ಮಂದಿಗೆ ಕೊರೊನಾ ಸೋಂಕು ಪತ್ತೆ

ಬೆಳ್ತಂಗಡಿ: ಇಡೀ ದೇಶದಲ್ಲಿ ಕೊರೊನಾ ಹಾವಳಿ ಸ್ವಲ್ಪ ಕಡಿಮೆಯಾಗಿದ್ದರೂ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸೋಂಕಿನ‌ ಪ್ರಮಾಣ ಹೆಚ್ಚಾಗುತ್ತಾ ಇದೆ.‌ ಬೆಳ್ತಂಗಡಿ ತಾಲೂಕು ಜಿಲ್ಲೆಯಲ್ಲೇ ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿದೆ. ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಲಾಯಿಲ ಗ್ರಾಮದ ಕನ್ನಾಜೆ ಪ್ರದೇಶದಲ್ಲಿ 28 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಲಾಯಿಲದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟಗೊಂಡಿದೆ. ಈಗಾಗಲೇ 50 ಕ್ಕಿಂತಲೂ ಅಧಿಕ ಮನೆಗಳಿರುವ ಈ ಪ್ರದೇಶಗಳಲ್ಲಿ ಇಷ್ಟೊಂದು ಪ್ರಮಾಣದ ಸೋಂಕು ಪತ್ತೆಯಾಗಿದು. ಎಲ್ಲರಿಗೂ ಆತಂಕ ಪ್ರಾರಂಭವಾಗಿದೆ. ಅದಲ್ಲದೆ ಈ ಪ್ರದೇಶವನ್ನು ಸೀಲ್ ಡೌನ್ ಮಾಡುವುದೇ ಅಥವಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸುವುದೇ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ

ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್..?

ಕನ್ನಾಜೆಯ ಬಡಾವಣೆಯ ಸೋಂಕಿತರನ್ನು ಲಾಯಿಲ ಕೋವಿಡ್ ಕೇರ್ ಸೆಂಟರ್ ಶೀಪ್ಟ್ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಪರಿಸರದಲ್ಲಿ 50 ಕ್ಕಿಂತಲೂ ಅಧಿಕ ಮನೆಗಳಿದ್ದು ಎಲ್ಲಾ ಮನೆಯವರ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಎಂದು ತಿಳಿಸಿದ್ದಾರೆ.‌ ಕೊರೊನಾ ಸೋಂಕು ಇರುವವರನ್ನು ಶಾಸಕರ ಕಚೇರಿಯ “ಶ್ರ ಮಿಕ ಸ್ಪಂದನಾ” ಅಂಬುಲೆನ್ಸ್ ನಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲಾಗುತ್ತಿದೆ.
ಮಾಹಿತಿಯ ಪ್ರಕಾರ ಕೆಲವರು ಕೋವಿಡ್ ಕೇರ್ ಸೆಂಟರ್ ಗೆ ಹೋಗಲು ಹಿಂದೇಟು ಹಾಕುತಿದ್ದಾರೆ ಅಧಿಕಾರಿಗಳು ಇವರನ್ನು ಮನವೊಲಿಸುವ ಕಾರ್ಯವನ್ನೂ ಮಾಡುತಿದ್ದಾರೆ.

ನಿಮ್ಮದೊಂದು ಉತ್ತರ