ಬಂದಾರು: ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈರೋಳಡ್ಕ- ಪುತ್ತಿಲ ಸಮೀಪ
ವಿರುವ ನದಿಯಲ್ಲಿ ನೀರು ನಾಯಿಗಳು ಹಿಂಡು ಜೂ.೨೫ ರಂದು ಪತ್ತೆಯಾಗಿದೆ.
ನೀರಿನಲ್ಲಿರುವ ಮೀನು
ಗಳನ್ನು ಹಿಡಿದು ತಿನ್ನುತ್ತಿರುವ ದೃಶ್ಯವನ್ನು ಕಂಡು ಬಂದಾರು ಜನತೆ ಅಚ್ಚರಿಗೊಂಡಿದ್ದಾರೆ. ಇತ್ತೀಚೆಗೆ ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಡಾಡಿಯ ಗ್ರಾಮದಲ್ಲಿ ಇದೇ ರೀತಿ ನೀರು ನಾಯಿಗಳ ಗುಂಪು ಪತ್ತೆಯಾಗಿತ್ತು.