ನಾವೂರು : ಇಲ್ಲಿಯ ಗ್ರಾಮ ಪಂಚಾಯತ್ ನ ತೃಪ್ತಿ ಸಂಜೀವಿನಿ ಒಕ್ಕೂಟದ ವತಿಯಿಂದ ಜೂ.24 ರಂದು ನಾವೂರು ಹಾಲಿನ ಡೈರಿಯ ಅಮೃತಾ ಸಭಾವನದಲ್ಲಿ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಗೌಡ ಇವರು ಬ್ಯಾಂಕ್ ಇನ್ಸೂರೆನ್ಸ್ ರೂ.12 ರ ಮತ್ತು ರೂ.330 ವಿಮಾ ಸಪ್ತಾಹ ಕಾರ್ಯಕ್ರಮದ ಉದ್ಘಾಟಣೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಜಯಾನಂದ್ ಇವರು ಬ್ಯಾಂಕ್ ಇನ್ಸೂರೆನ್ಸ್ ಬಗ್ಗೆ ಮಾಹಿತಿಯನ್ನು ನೀಡಿದರು. ಸದ್ರಿ ವಿಮಾ ಸಪ್ತಾಹ ಕಾರ್ಯಕ್ರಮದಲ್ಲಿ ಉಷಾ ಕಾಮತ್, ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಮತ್ತು ಪಂಚಾಯತ್ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಎಂಬಿಕೆ, ಎಲ್.ಸಿಆರ್.ಪಿ ಹಾಗೂ ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರು.ಸದ್ರಿ ಬ್ಯಾಂಕ್ ಇನ್ಸೂರೆನ್ಸ್ ರೂ.12 ರ ಮತ್ತು ರೂ.330ವಿಮೆಯ ಖಾತೆಯನ್ನು 62 ಜನ ಸದಸ್ಯರ ಸದುಪಯೋಗ ಪಡೆದುಕೊಂಡರು.ತೃಪ್ತಿ ಸಂಜೀವಿನಿ ಒಕ್ಕೂಟದ ಎಂಬಿಕೆ ಯಾದ ಶ್ರೀಮತಿ ಸೇವಿತಾ ಇವರು ಧನ್ಯವಾದವಿತ್ತರು.