ಗ್ರಾಮಾಂತರ ಸುದ್ದಿ

ಪ್ರತಿಷ್ಠಿತ ಕುವೆಂಪು ಫೆಲೋಶಿಫ್ ಗೆ ಡಾ.ರೋಹಿಣಾಕ್ಷ ಶಿಲಾ೯ಲು

ಬೆಳ್ತಂಗಡಿ  : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಕುವೆಂಪು ಸಾಹಿತ್ಯ ಅಧ್ಯಯನಕ್ಕಾಗಿ ನೀಡುವ ಬಹು ಪ್ರತಿಷ್ಠಿತ 2020 ರ ಸಾಲಿನ ಕುವೆಂಪು ಹಿರಿಯ ಫೆಲೋಶಿಪ್‌ಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿಯ ಜಾನಪದಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲು ರವರು ಆಯ್ಕೆಯಾಗಿದ್ದಾರೆ. ಡಾ. ಈ ಫೆಲೋಶಿಪ್ ಮೂರು ಲಕ್ಷ ರೂಪಾಯಿಗಳದ್ದಾಗಿದ್ದು ಹತ್ತು ತಿಂಗಳ ಕಾಲಾವಧಿಯದ್ದಾಗಿರುತ್ತದೆ.

“ಕುವೆಂಪು ಸಾಹಿತ್ಯದಲ್ಲಿ ಪ್ರಕಟಗೊಂಡ ದಾರ್ಶನಿಕತೆ, ಆಧ್ಯಾತ್ಮಿಕತೆ ಮತ್ತು ವೈಚಾರಿಕತೆಯ ಸ್ವರೂಪ ವಿವೇಚನೆ” ಎಂಬ ವಿಷಯದಲ್ಲಿ ಇವರು ಸಲ್ಲಿಸಿದ ಸಂಶೋಧನಾ ಪ್ರಸ್ತಾವನೆಯನ್ನು ಪ್ರಾಧಿಕಾರದ ತಜ್ಞರ ಸಮಿತಿ ಪರಿಶೀಲಿಸಿ ಸಂದರ್ಶನ ನಡೆಸಿ ಈ ಆಯ್ಕೆಯನ್ನು ನಡೆಸಿದೆ. ಹತ್ತು ತಿಂಗಳ ಅವಧಿಯಲ್ಲಿ ಪ್ರಾಧಿಕಾರವು ಸೂಚಿಸುವ ಸ್ಥಳದಲ್ಲಿ ಎರಡು ಉಪನ್ಯಾಸಗಳನ್ನು ಇವರು ನೀಡಬೇಕಾಗುತ್ತದೆ ಮತ್ತು ಅಧ್ಯಯನದ ಮಹಾಪ್ರಬಂಧವನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ.

ಬೆಳ್ತಂಗಡಿ ತಾಲೂಕಿನ ಶಿಲಾ೯ಲು ನಿವಾಸಿ ಯಾಗಿರುವ ಇವರು ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ಈ ಹಿಂದೆ ಕನ್ನಡ ಉಪನ್ಯಾಸಕಾರಾಗಿಕರ್ತವ್ಯ ನಿರ್ವಹಿಸಿದ್ದರು.

ನಿಮ್ಮದೊಂದು ಉತ್ತರ