ಬೆಳ್ತಂಗಡಿ: ಲಾಕ್ ಡೌನ್ ನಿಂದ ಬಸ್ ಅಥವಾ ಇತರ ವಾಹನ ವ್ಯವಸ್ಥೆ ಇಲ್ಲದೆ ಉಜಿರೆ ಬಸ್ ಸ್ಟ್ಯಾಂಡ್ ನಲ್ಲಿ ಬಾಕಿ ಯಾಗಿದ್ದ ತಾಯಿ ಮತ್ತು ಮಗುವಿಗೆ ಉಜಿರೆ ಪಂಚಾಯಿತಿವತಿಯಿಂದ ವಸತಿ, ಆಹಾರ ಹಾಗೂ ಇತರ ಅಗತ್ಯವ್ಯವಸ್ಥೆ
ಗಳನ್ನುಮಾಡಲಾಯಿತು.
ತಾಲೂಕಿನ ಅಲ್ಲಲ್ಲಿ ಬೀದಿ ವ್ಯಾಪಾರ ನಡೆಸಿ ಅಲ್ಲೇ ರಾತ್ರಿಕಳೆಯುತ್ತಿದ್ದ ಬೆಂಗಳೂರು ಮೂಲದ ದಿವ್ಯಾ (22)ಹಾಗೂ ಒಂದೂವರೆ ವರ್ಷದ ಮಗು ಅಂಜಲಿ ಮಂಗಳವಾರ ಲಾಕ್ ಡೌನ್ ಕಾರಣ ವ್ಯಾಪಾರಕ್ಕೆ ಎಲ್ಲೂ ಜಾಗ ಸಿಗದೆ ಉಜಿರೆ ಬಸ್ ಸ್ಟ್ಯಾಂಡ್ ನಲ್ಲಿ ಕಂಡುಬಂದಿದ್ದಾರೆ.
ಚಿಂತಾಮಣಿ ಮೂಲದ ಪತಿ ಊರಿಗೆ ಹೋಗಿದ್ದು ಕರ್ಫ್ಯೂ ಕಾರಣ ಬರಲು ಸಾಧ್ಯವಾಗಿಲ್ಲ.
ಬೆಂಗಳೂರಿನ ತಾಯಿ ಮನೆಗೆ ಹೋಗಲು ಉಜಿರೆಯ ಬಸ್ ಸ್ಟ್ಯಾಂಡ್ ನಲ್ಲಿ ಕಂಡುಬಂದವರನ್ನು,ಗಸ್ತು ನಿರತ ಪೊಲೀಸರು ಗಮನಿಸಿವಿಚಾರಿಸಿದಾಗ ವಿಷಯ ತಿಳಿದು
ಬಂದಿದೆ. ಸ್ಥಳೀಯ ಸಮಾಜ ಸೇವಕ ರವಿ ಚಕ್ಕಿತ್ತಾಯ,ರಾಜೇಶ್ ಮುರುಡಿತ್ತಾಯ ಮೊದಲಾದವರು ಈ ಬಗ್ಗೆ ಉಜಿರೆ ಪಂಚಾಯಿತಿಗೆ ಮಾಹಿತಿ ನೀಡಿದರು.
ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ,ಕಾರ್ಯದರ್ಶಿ ಜಯಂತ್ ಹಾಗೂ ಸಿಬ್ಬಂದಿ ಆಗಮಿಸಿ,ಇವರಿಗೆ ಪಂಚಾಯಿತಿಯಲ್ಲಿ ಇರುವ ಕೋಣೆಯಲ್ಲಿ ವಸತಿ ಹಾಗೂ ಆಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಸಾಯಿ ಕ್ರಿಕೆಟರ್ಸ್ ಉಜಿರೆ ತಂಡದ ಸದಸ್ಯರು ಸಹಕರಿಸಿದರು.”ಬೆಂಗಳೂರಿಗೆ ಬಸ್ ಅಥವಾ ಬೇರೆ ವಾಹನ ವ್ಯವಸ್ಥೆ ಆಗುವ ತನಕ ತಾಯಿ ಹಾಗೂ ಮಗುವಿಗೆ ಪಂಚಾಯಿತಿಯಿಂದ ಆಹಾರ,ವಸತಿ ಹಾಗೂ ಇತರ ಅಗತ್ಯ ವ್ಯವಸ್ಥೆ ಮಾಡಲಾಯಿತು.