ಬೆಳ್ತಂಗಡಿ: 2024 -2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಲೋಕಯ್ಯ ಸೇರಾ ಇವರಿಗೆ ಪ್ರಶಸ್ತಿ ಸಿಗಲು ಸರಕಾರಕ್ಕೆ ಶಿಫಾರಸ್ಸು ಮಾಡಿದ ಕರ್ನಾಟಕ ಸರ್ಕಾರದ ಮಾಜಿ ಸಚಿವ. ಬಿ. ರಮಾನಾಥ ರೈ ರವರನ್ನು ಅವರ ನಿವಾಸಕ್ಕೆ ತೆರಳಿ ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯಸ್. ಪ್ರಭಾಕರ ಶಾಂತಿಕೋಡಿ, ಸ್ಥಾಪಕ ಅಧ್ಯಕ್ಷ ರಾದ ಶೀನಾ ಬಂಗೇರ , ಸಮಿತಿ ಸದಸ್ಯರು ಆದ ಸಂತೋಷ್ ನಾರವಿ, ವಿನಯ್ ಕುಮಾರ್ ಕೊಯ್ಯುರ್, ಓಡಿಲ್ನಾಳ ವಲಯ ಅಧ್ಯಕ್ಷ ರಾದ ದುಗ್ಗಪ್ಪ ಪೊಕ್ಕಿ ಉಪಸ್ಥಿತರಿದ್ದರು.