ಸುಳ್ಯ: ಇಲಿ ಜ್ವರದಿಂದ ಬಳಲುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಸುಳ್ಯದ ಜಯನಗರದಲ್ಲಿ ನಡೆದಿದೆ. ಜಯನಗರ ರಿಚರ್ಡ್ ಕ್ರಾಸ್ತ ಮತ್ತು ಜುಲಿಯಾನ ಡಿಸೋಜ ದಂಪತಿ ಪುತ್ರ ಆಕರ್ಷ್ ಎಲೋಸಿಯಸ್ ಕ್ರಾಸ್ತ(35) ಮೃತಪಟ್ಟ ಯುವಕ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಹಿನ್ನೆಲೆ ಆಕರ್ಷ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಕರ್ಷ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.