ಬೆಳ್ತಂಗಡಿ: ನಗರದ ಹಿರಿಯ ರಿಕ್ಷಾ ಚಾಲಕ, ಸಾಮಾಜಿಕ ಮುಂದಾಳು ಹೆಚ್.ಎಂ ಮೊಯಿದಿನ್ ಲಾಯಿಲ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜು.22ರಂದು ನಿಧನರಾದರು.
ಕೆಲದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸವಾಗಿತ್ತು.
ರಿಕ್ಷಾ ಚಾಲಕರಾಗಿ ಎಲ್ಲರ ಪರಿಚಿತರಾಗಿದ್ದ ಮೊಯಿದಿನ್ ಅವರು ಸಮಾಜ ಸೇವಕರೂ ಆಗಿದ್ದರು.
ಕಠಿಣ ದುಡಿಮೆಯ ಆದರ್ಶದೊಂದಿಗೆ ಕ್ರಿಯಾಶೀಲತೆ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿ
ದ್ದರು.ಲಾಯಿಲಮಸೀದಿ
ಯಆಡಳಿತಮಂಡಳಿಯಪದಾಧಿಕಾರಿಯಾಗಿ, ಲಾಯಿಲ ಪಂಚಾಯತ್ ಸದಸ್ಯರಾಗಿ ಸೇರಿದಂತೆ ಸಂಘ ಸಂಸ್ಥೆಗಳಲ್ಲಿ ಸೇವೆ ನೀಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವೆ ಪುತ್ರಿ ಹಾಗೂ ಬಂಧುವರ್ಗ
ದವರನ್ನು ಅಗಲಿದ್ದಾರೆ.