ನಾಲ್ಕೂರೂ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಕೃಷಿಕ ಪಾಡಿ ಮನೆಯ ಅಣ್ಣಿ ಪೂಜಾರಿ (65ವ) ಅವರು ಜ್ವರದಿಂದ ಬಳಲಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಮಧ್ಯರಾತ್ರಿ ಬೆಳ್ತಂಗಡಿ ಆಸ್ಪತ್ರೆಯಲ್ಲಿ ನಿಧನರಾದರು.
ಬಳಂಜ ನಾಲ್ಕೂರಿನ ಆಶಾ ಕಾರ್ಯಕರ್ತೆ
ಯರು ಮನೆ ಬೇಟಿ ಸಂಧರ್ಭ ಇವರ ಮನೆಗೆ ಭೇಟಿ ನೀಡಿದ್ದು ಕಳೆದ ಕೆಲ ದಿನಗಳಿಂದ ಜ್ವರ
ದಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದು, ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಕೋವಿಡ್ ಪರೀಕ್ಷೆ ನಡೆಸಿದಾಗ ಸೊಂಕು ಧೃಡಪಟ್ಟಿತ್ತು.ನಂತರ ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತರು ಪತ್ನಿ ಜಾನಕಿ, 3 ಮಕ್ಕಳಾದ ತಿಮ್ಮಪ್ಪ ಪೂಜಾರಿ, ಅಚ್ಚುತ್ತ ಪೂಜಾರಿ, ಆಶಾ ಹಾಗೂ ಅಪಾರ ಕುಟುಂಬವರ್ಗ
ದವರನ್ನು ಅಗಲಿದ್ದಾರೆ.
ಅಂತ್ಯಸಂಸ್ಕಾರವನ್ನು ಉಜಿರೆ ಹಿಂದೂ ರುದ್ರ
ಭೂಮಿಯಲ್ಲಿ ಕುಟುಂಬಸ್ಥರಉಪಸ್ಥಿತಿ ಯಲ್ಲಿ ಬಳಂಜ ಗ್ರಾ. ಪಂ ಸದಸ್ಯಯಶೋಧರ
ಶೆಟ್ಟಿ ಹಾಗೂ ಬಳಂಜ.ವೀರಕೇಸರಿಸಂಘಟನೆಯ ಸದಸ್ಯರು ನೇರವೇರಿಸಿದರು.