ಡಿ.3 ವೇಣೂರು ಡಿ.17 ಹೊಕ್ಕಾಡಿಗೋಳಿ ಡಿ.18 ಬಳ್ಳಮಂಜ ಮಾ.18 ಬಂಗಾಡಿ
ಬೆಳ್ತಂಗಡಿ: ದ.ಕ ಜಿಲ್ಲಾ ಕಂಬಳ ಸಮಿತಿ ಸಭೆ ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಅ.2ರಂದು ಮೂಡುಬಿದಿರೆಯಲ್ಲಿ ಜರಗಿದ್ದು, ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ವರ್ಷದ ಕಂಬಳದ ಸಂಭಾವ್ಯ ಪಟ್ಟಿಯನ್ನು ಪ್ರಕಟಿಸಲಾಯಿತು.
ನವೆಂಬರ್.5ರಂದು ಶಿರ್ವ ಕಂಬಳದೊಂದಿಗೆ ಕಂಬಳ ಪ್ರಾರಂಭವಾಗಲಿದೆ, ಏಪ್ರಿಲ್ 8ರವರೆಗೆ ಒಟ್ಟು 24 ಕಂಬಳಗಳು. ಕೊರೊನಾ ಹಾವಳಿಯಿಂದಾಗಿ ಕಲೆದ ಬಾರಿಯ ಕಂಬಳ ಡಿ.5ರೆಂದು ಆರಂಭಗೊಂಡಿತ್ತು. ಒಟ್ಟು 18 ಕಂಬಗಳ ದಿನಾಂಕಗಳನ್ನು ಕಂಬಳ ಸಮಿತಿ ಪ್ರಕಟಿಸಿತ್ತು. 5 ಕಂಬಳ ಪೂರ್ತಿಗೊಳ್ಳುವಷ್ಟರಲ್ಲಿ ವಾರಂತ್ಯ ಕರ್ಫ್ಯೂ, ಕೊರೊನಾ ನಿರ್ಬಂಧ ಜಾರಿಗೊಂಡ ಹಿನ್ನಲೆಯಲ್ಲಿ ಉಳಿದ 11 ಕಂಬಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಳಿಕ ಫೆಬ್ರವರಿಯಲ್ಲಿ ವಾರಾಂತ್ಯ ಕರ್ಫ್ಯೂ ತೆರವುಗೊಂಡ ಬಳಿಕ ಮರು ಆರಂಭಗೊಂಡು ಏಪ್ರಿಲ್‌ನಲ್ಲಿ ಕೊನೆಗೊಂಡಿತ್ತು. ಈ ಬಾರಿ ಹಿಂದಿನ ಸಮಯಕ್ಕೆ ಪ್ರಾರಂಭವಾಗಲಿದೆ.
ಕಂಬಳದ ವೇಳಾಪಟ್ಟಿ
ನ.5 ಶಿರ್ವ, ನ.12 ಪಿಲಿಕುಳ, ನ.19 ಪಜೀರ್, ನ.26 ಕಕ್ಯಪದವು, ಡಿ.3 ವೇಣೂರು, ಡಿ.10 ಬಾರಾಡಿಬೀಡು, ಡಿ.17 ಹೊಕ್ಕಾಡಿಗೋಳಿ, ಡಿ.18 ಬಳ್ಳಮಂಜ, ಡಿ.24 ಮೂಡುಬಿದಿರೆ, ಡಿ.31 ಮೂಲ್ಕಿಅರಸು, ಜ.7 ಮಿಯಾರು, ಜ.15 ಅಡ್ವೆನಂದಿಕೂರು, ಜ.22 ಮಂಗಳೂರು ಬಂಗ್ರಕೂಳೂರು, ಜ.28 ಐಕಳಬಾವ, ಫೆ.4 ಪುತ್ತೂರು, ಫೆ.11 ವಾಮಂಜೂರು, ಫೆ.18 ಕಟಪಾಡಿ, ಫೆ.25 ಜಪ್ಪು, ಮಾ.4 ನಾವೂರ, ಮಾ.11 ಉಪ್ಪಿನಂಗಡಿ , ಮಾ.18 ಬಂಗಾಡಿ, ಮಾ.25 ಪೈವಳಿಕೆ, ಎ.1 ಸುರತ್ಕಲ್, ಎ.8 ಪಣಪಿಲ