ಬಂಟ್ವಾಳ : ಸರ್ಕಾರಿ ಶಾಲೆ ಅಂದ್ರೆ ಇಷ್ಟೇನಾ ಅನ್ನೋರಿಗೆ ಈ ಶಾಲೆಯೊಂದು ಸೆಡ್ಡು ಹೊಡೆದು ನಿಂತಿದೆ. ಸರ್ಕಾರಿ ಶಾಲೆಯೊಂದನ್ನು ಹೀಗೂ ನಿರ್ವಹಿಸಬಹುದು ಎಂಬುವುದಕ್ಕೆ ಈ ಸರ್ಕಾರಿ ಶಾಲೆಯೇ ಉದಾಹರಣೆ.
ಬಂಟ್ವಾಳ ತಾಲೂಕಿನ ಗಡಿಗ್ರಾಮಗಳಲ್ಲೊಂದಾದ
ಮಿತ್ತೂರಿನಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 628 ಅಡಿಕೆ ಮರಗಳಿದ್ದು, ಇದರಿಂದ ಬಂದ ಫಲದಿಂದ ದೊರೆತ ಆರ್ಥಿಕ ಆದಾಯದಿಂದ ಸರ್ಕಾರಿ ಶಾಲೆಯೊಂದು ಬಸ್ ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದೆ ಈ ಶಾಲೆ. ಇದೇ ಬಸ್ ನಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲಾಗುತ್ತಿದೆ.
ಇನ್ನು ಶಾಲೆಗೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಬಸ್‌ಗೆ ಚಾಲನೆ ನೀಡಿ, ಶಾಲೆಗೆ ಮತ್ತಷ್ಟು ನೆರವುಗಳನ್ನು ಘೋಷಿಸಿದರು. ಇದೀಗ ಶಾಲೆ ಮಕ್ಕಳು ಬಸ್ಸು ಹತ್ತಿ ಶಾಲೆಗೆ ಆಗಮಿಸಿ ಸಂಭ್ರಮಪಟ್ಟರು.