ಬೆಳ್ತಂಗಡಿ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಇಂದು ಬೆಳಿಗ್ಗೆ 9.10, 9.11ರ ಸಮಯದಲ್ಲಿ ಲಘು ಕಂಪನದ ಅನುಭವ ಆಗಿದೆ.ಹಲವೆಡೆ ಶಬ್ದದೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ಅನುಭವ ಹಂಚಿಕೊಂಡಿದ್ದಾರೆ. ಕಲ್ಲುಗುಂಡಿ, ಸಂಪಾಜೆ, ಗೂನಡ್ಕ, ಅಡ್ತಲೆ, ಅರಂತೋಡು, ಅರಂಬೂರು ಮತ್ತಿತರ ಭಾಗಗಳಲ್ಲಿ ಗುಡುಗಿನ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಗೂನಡ್ಕದಲ್ಲಿ
ಕಚೇರಿಯಲ್ಲಿ ಕುಳಿತಿದ್ದಾಗ ಭಾರೀ ಶಬ್ದದೊಂದಿಗೆ ಸುಮಾರು 3 ಸೆಕೆಂಡುಗಳ ಕಾಲ ಕಂಪನ ಆದ ಅನುಭವ ಆಗಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿಯೂ ಲಘು ನಡುಕ ಉಂಟಾಗಿದೆ. ಬೀರಮಂಗಲ ಭಾಗದಲ್ಲಿ ಗುಡುಗಿನ ಶಬ್ದದೊಂದಿಗೆ ಸುಮಾರು4- 5 ಸೆಕೆಂಡುಗಳ ಕಾಲ ನಡುಗಿದ ಅನುಭವ ಆಗಿದೆ ಎಂದು ಆರ್.ಕೆ.ಭಟ್ ಮಾಹಿತಿ ಹಂಚಿಕೊಂಡಿದ್ದಾರೆ. ತಾಲೂಕಿನ ವಿವಿಧ ಭಾಗಗಳಲ್ಲಿ ಕಂಪನದ ಅನುಭವ ಆಗಿರುವ ಬಗ್ಗೆ ಸಾರ್ವಜನಿಕರೂ ಮಾಹಿತಿಗಳನ್ನು ನೀಡಿದ್ದಾರೆ ಹೆಚ್ಚಿನ ಮಾಹಿತಿ ಅಧಿಕಾರಿಗಳ ಮಾಹಿತಿಯ ನಂತರವಷ್ಟೆ ತಿಳಿದು ಬರಬೇಕಾಗಿದೆ.