ಜಿಲ್ಲಾ ವಾರ್ತೆ

ದೈವಸ್ಥಾನ ಮತ್ತು ನಾಗನ ಬ್ರಹ್ಮ ಪೀಠಕ್ಕೆ ದುಷ್ಕರ್ಮಿಗಳಿಂದ ಹಾನಿ

ಬೈಕಂಪಾಡಿ: ಬೈಕಂಪಾಡಿ ಕರ್ಕೇರ ಮೂಲ ಸ್ಥಾನ ಜರಂದಾಯ ದೈವಸ್ಥಾನ ಮತ್ತು ನಾಗನ ಬ್ರಹ್ಮ ಪೀಠವನ್ನು ದುಷ್ಕರ್ಮಿಗಳು ಹಾನಿಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಇತ್ತೀಚೆಗೆ ದೇವಾಲಯಗಳನ್ನು ಹಾನಿ ಮಾಡುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿದ್ದು.
ಆಯಾ ಜನರ ಪ್ರಾದೇಶಿಕ ಮತ್ತು ಜನಾಂಗಿಯ
ನಂಬಿಕೆಗಳಿಗೆ ಮತ್ತೆ ಮತ್ತೆ ಪೆಟ್ಟು ಬೀಳುತ್ತಿವೆ.
ಮುಂಜಾನೆ ದೈವಸ್ಥಾನಕ್ಕೆ ಭೇಟಿ ನೀಡಿದವರು
ಇದನ್ನು ಗಮನಿಸಿ ಸಂಬಂಧಪಟ್ಟವರಿಗೆ
ದೂರವಾಣಿ ಕರೆ ಮಾಡಿ ತಿಳಿಸಿದರು.ಸ್ಥಳಕ್ಕೆ
ಧಾವಿಸಿರುವ ಪೊಲೀಸರು ತನಿಖೆ
ಕೈಗೊಂಡಿದ್ದಾರೆ.


ಒಂದು ನಾಗನ ಮೂರ್ತಿಯನ್ನು ಭಗ್ನ
ಮಾಡಿದ್ದರೆ,ನಂದಿಯ ಕಲ್ಲಿನ ವಿಗ್ರಹಕ್ಕೂ
ಹಾನಿಮಾಡಿದ್ದಾರೆ. ಕಪಾಟು ಒಡೆದು ಚೆಲ್ಲಾ
ಪಿಲ್ಲಿ ಮಾಡಲಾಗಿದ್ದು, ಹಾಗೂ ಗೇಟುಗಳನ್ನು
ಒಡೆದು ಹಾಕಿದ್ದಾರೆ. ಇಂತಹ ಕ್ಷೇತ್ರಗಳಿಗೆ ಸೂಕ್ತ ಭದ್ರತೆಗಳನ್ನು ಒದಗಿಸುವ ಅಗತ್ಯವಿದೆ.

ನಿಮ್ಮದೊಂದು ಉತ್ತರ